ಮೈಸೂರು: ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಗೃಹಶೋಭೆ ವಸ್ತುಪ್ರದರ್ಶನದಲ್ಲಿ ಬಗೆಬಗೆಯ ವಿಧಾನದಿಂದ ತಯಾರಿಸಿದ ಕೇಕ್ ಉತ್ಸವ ಹಾಗೂ ಪ್ರದರ್ಶನ ನಡೆಯುತ್ತಿದ್ದು, ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ.
ಕೇಕ್ ಉತ್ಸವದಲ್ಲಿ ಮೈಸೂರಿನ ಸುಪ್ರಸಿದ್ಧ ದೊಡ್ಡ ಗಡಿಯಾರ ಆಕರ್ಷಣೆಯ ಕೇಂದ್ರಬಿಂದುವಾದರೆ ಇನ್ನೂ ವೆಡ್ಡಿಂಗ್ ಕೇಕ್, ಲವರ್ ಕೇಕ್, ಮ್ಯಾಂಗೊ ಕೇಕ್, ಕ್ಯಾಂಡಿ ಕೇಕ್ ಸೇರಿದಂತೆ ಹಲವು ಬಗೆಯ ಕೇಕ್ ಮಾದರಿಗಳು ನೋಡುಗರ ಗಮನಸೆಳೆದಿವೆ. ದೊಡ್ಡ ಗಡಿಯಾರ ಮಾದರಿಯ ಕೇಕ್ ನಿರ್ಮಿಸಲು 2,080 ಕೆ.ಜಿ ಐಸಿ ಶುಗರ್ ಬಳಸಿ12/15 ಅಳತೆಯ ನಿರ್ಮಿಸಿದ್ದು, ಕೇರಳದ ಸತ್ಯನ್ ಅವರನ್ನು ಒಳಗೊಂಡ 6 ಮಂದಿ ತಂಡ 30 ದಿನಗಳ ಅವಧಿಯಲ್ಲಿ ವಿವಿಧ ಬಗೆಯ ಕೇಕ್ ಮಾದರಿ ತಯಾರಿಸಿವೆ. ಇನ್ನೂ 1,500 ಕೆ.ಜಿ ಕೇಕ್ ಬಳಸಿ 10/12 ಅಳತೆಯ ವೆಂಡ್ಡಿಗ್ ಕೇಕ್ ಸಹ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಕಳೆದ 8 ವರ್ಷಗಳಿಂದ ಕ್ರಿಸ್ಮಸ್ ಕೇಕ್ ಉತ್ಸವವನ್ನು ನಡೆಸುತ್ತಿದ್ದು ಈ ಹಿಂದೆ ಲಂಡನ್ ಬ್ರಿಡ್ಜ್, ಮೈಸೂರು ಅರಮನೆ, ಲಲಿತ ಮಹಲ್ ಪ್ಯಾಲೇಸ್, ತಾಜ್ ಮಹಲ್ ಮಾದರಿಯ ಕೇಕ್ ಗಳನ್ನು ತಯಾರಿಸಿವೆ.
ಒಟ್ಟಾರೆ ಕ್ರಿಸ್ಮಸ್ ಸಡಗರವನ್ನು ವಿಭಿನ್ನ ಬಗೆಯ ಕೇಕ್ ಗಳೊಂದಿಗೆ ಸವಿಯುವ ಅವಕಾಶ ಸಾಂಸ್ಕೃತಿಕ ನಗರಿಗರಿಗೆ ಕೇಕ್ ಉತ್ಸವದಲ್ಲಿ ಲಭಿಸಿದೆ.