ಮೈಸೂರು: ಇಲ್ಲಿನ ಅರಮನೆಯ ಬ್ರಹ್ಮಪುರಿ ಗೇಟ್ ನಲ್ಲಿರುವ ಶ್ರೀ ಸಂಜೀವಾಂಜನೇಯ ಸ್ವಾಮಿ ಮಂದಿರದಲ್ಲಿ ಹನುಮ ಜಯಂತಿ ನೆರವೇರಿತು.
ಶ್ರೀ ಸಂಜೀವಾಂಜನೇಯ ಸ್ವಾಮಿ 400 ವರ್ಷಗಳ ಹಿಂದೆ ಅಂದಿನ ಒಡೆಯರ್ ಬಿಳಿ ಅಪರೂಪದ ಅಮೃತ ಶಿಲೆಯಲ್ಲಿ ಕೆತ್ತಿಸಿದ ಆಂಜನೇಯ ಸ್ವಾಮಿ ಮೂರ್ತಿ ಪ್ರಪ್ರಂಚದ ಯಾವ ಭಾಗದಲ್ಲಿ ಕಾಣ ದೊರೆಯುವುದಿಲ್ಲ. ಮಹಾರಾಜರು ಯಾವುದೇ ಕಾರ್ಯವನ್ನು ಮಾಡುವಾಗ ಮತ್ತು ಅರಮನೆ ಬಿಟ್ಟು ಹೊರ ಹೋಗುವಾಗ ಮೊದಲ ಪೂಜೆಯನ್ನು ಈ ಸಂಜೀವಾಂಜನೇಯನಿಗೆ ಸಲ್ಲಿಸುವುದು ವಾಡಿಕೆಯಾಗಿದೆ.
ಮೂರ್ತಿಯ ವಿಶೇಷತೆ ಏನೆಂದರೇ ತನ್ನ ಎಡಗೈನಲ್ಲಿ ಸಂಜೀವಿನಿ ಬೆಟ್ಟವನ್ನು ಹೊತ್ತುಕೊಂಡು ಬರುವಾಗ ಹೆಣ್ಣಿನ ರೂಪ ತಳೆದ ರಾಕ್ಷಸಿಯೊಬ್ಬಳು ಸಂಜೀವಿನಿ ಬೆಟ್ಟವನ್ನು ಕಿತ್ತುಕೊಳ್ಳಲು ಮುಂದಾದಾಗ ತನ್ನ ಕಾಲಿನ ಕೆಳಗೆ ಆಕೆಯನ್ನು ತುಳಿದು ಮುನ್ನಡೆಯುತ್ತಿದ್ದ ಮಹಾರಾಜರು ವಿಜಯದಶಮಿ ಸಂಕೇತವಾಗಿ ಈ ಮೂರ್ತಿಯನ್ನು ಕೆತ್ತಿಸಿದರು ಎನ್ನುತ್ತಾರೆ ರಾಜ ಪುರೋಹಿತರು. ಹಿಂದೆ ರಾಜರು ಮಾತ್ರ ಪೂಜಿಸಲ್ಪಡುತ್ತಿದ್ದ ಈ ಸಂಜೀವಾಂಜನೇಯ ಸ್ವಾಮಿ ಇಂದು ಹನುಮ ಜಂಯತಿ ಪ್ರಯುಕ್ತ ಜನ ಸಾಮಾನ್ಯರಿಂದಲೂ ಸಹ ಪೂಜೆ ಸಲ್ಲಿಸುತ್ತಿದ್ದು ವಿಶೇಷವಾಗಿದೆ.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಸ್ಥಾನ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ, ಪಮಚಮುಖಿ ಗಣಪತಿ ದೇವಾಸ್ಥಾನ ಸೇರಿದಂತೆ ನಗರದ ವಿವಿದ ದೇವಾಲಯಗಳಲ್ಲಿ ಹನುಮ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.