ಮೈಸೂರು: ಇಲ್ಲಿನ ಶ್ರೀ ಗಣಪತಿ ಸಚ್ಛಿದಾನಂದ ಆಶ್ರಮದಲ್ಲಿ ನಡೆದ ದತ್ತ ಜಯಂತಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ದಂಪತಿಗಳು ಭಾಗವಹಿಸಿ ಸ್ವಾಮೀಜಿ ಜತೆ ಗುಪ್ತ ಸಮಾಲೋಚನೆ ನಡೆಸಿದರು.
ನಾಲ್ಕು ದಿನಗಳ ಕಾಲ ಮೈಸೂರಿನ ಶ್ರೀ ಗಣಪತಿ ಸಚ್ಛಿದಾನಂದ ಆಶ್ರಮದಲ್ಲಿ ನಡೆಯುವ ದತ್ತ ಜಯಂತಿಯಲ್ಲಿ ಪಾಲ್ಗೊಂಡ ಮಾಜಿ ಎಸ್.ಎಂ ಕೃಷ್ಣ ದಂಪತಿಗಳು ಹೋಮ ಹಾಗೂ ಪೂಜೆಯಲ್ಲಿ ಪಾಲ್ಗೊಂಡು ನಂತರ ಸ್ವಾಮೀಜಿಯವರ ಪ್ರವಚನವನ್ನು ಕೇಳಿದ ನಂತರ ಪ್ರಸಾದ ಸ್ವೀಕರಿಸಿ ದತ್ತಮಾಲೆ ಹಾಕಿಸಿಕೊಂಡ ಬಳಿಕ ಸ್ವಾಮೀಜಿಗಳ ಜತೆ ಗುಪ್ತವಾಗಿ ಹದಿನೈದು ನಿಮಿಷಗಳ ಕಾಲ ಸಮಾಲೋಚನೆ ನಡೆಸಿದರು.
ಇದಕ್ಕೆ ರೈಲಿನಲ್ಲಿ ಮೈಸೂರಿಗೆ ಆಗಮಿಸಿದ ಎಸ್.ಎಂ ಕೃಷ್ಣ ದಂಪತಿಗಳು ಮಾಧ್ಯಮಗಳೊಂದಿಗೆ ಮಾತನಾಡಿ ನಾನು ದತ್ತ ಜಯಂತಿಯಲ್ಲಿ ಭಾಗವಹಿಸಲು ಬಂದಿದ್ದು, ರಾಜಕೀಯವಾಗಿ ಏನನ್ನು ಮಾತನಾಡುವುದಿಲ್ಲ ಎಂದರು.