ಮೈಸೂರು: ಲಕ್ಕಿಡಿಪ್ ಹೆಸರಿನಲ್ಲಿ ಹತ್ತೇ ರೂಗೆ ಬುಲೆಟ್ ಬೈಕ್, ಕಾರು ಸಿಗುತ್ತದೆ ಎಂದು ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಘಟನೆ ಮೈಸೂರಿನ ಸರ್ಕಾರಿ ವಸ್ತುಪ್ರದರ್ಶನ ಆವರಣದಲ್ಲಿ ನಡೆಯುತ್ತಿದೆ.
ನಗರದ ಆಲಿವ್ ಆಯ್ಡ್ಸ್ ಮತ್ತು ಈವೆಂಟ್ ಸಂಸ್ಥೆ ವಸ್ತುಪ್ರದರ್ಶನ ವೀಕ್ಷಿಸಲು ಬರುವ ಮಂದಿ ಇಂತಹದೊಂದು ಮಕ್ಮಲ್ ಟೋಪಿ ಹಾಕುತ್ತಿದ್ದು, ಶೋನಲ್ಲಿ ಇಟ್ಟಿರುವ ಕಾರು, ಬೈಕ್ ಪಡೆಯುವ ಆಸೆ ನಿಮಗಿದ್ದರೆ ಲಕ್ಕಿ ಡ್ರಾ ಡಿಪ್ ಮಾಡುತ್ತಿದ್ದೇವೆ. 10 ರೂಪಾಯಿಗಳನ್ನು ನೀಡಿ ಕೂಪನ್ ಪಡೆಯುವಂತೆ ತಿಳಿಸುತ್ತಾರೆ. ಅಲ್ಲದೆ 10 ರೂ ನೀಡಿ ಕೂಪನ್ ಪಡೆದ ಮಂದಿ ಅರ್ಧ ಕೂಪನ್ ನನ್ನು ಗಾಜಿನ ಡಬ್ಬದಲ್ಲಿ ಹಾಕಿ ಉಳಿದರ್ಧ ಕೂಪನ್ ಪಡೆದು ಹೋಗುತ್ತಿದ್ದಾರೆ. ಎಷ್ಟೋ ಮಂದಿಗೆ ಬಹುಮಾನ ನೀಡುತ್ತಾರೆ. ಎಷ್ಟು ಬಹುಮಾನ ಸಿಗುತ್ತೆ ಅನ್ನೋದೆ ಪ್ರಶ್ನೆಯಾಗಿದೆ.
ಆದರೆ ಜನರು ಮಾತ್ರ ಜನಮರಳೋ, ಜಾತ್ರೆ ಮರಳೋ ಅನ್ನೋ ರೀತಿ ಪ್ರದರ್ಶನದಲ್ಲಿರುವ ಕಾರು, ಬುಲೆಟ್ ಬೈಕ್ ನೋಡಿ ಮರಳಾಗಿ 10 ರೂಗೆ ಕೂಪನ್ ಪಡೆದು ಹೋಗುತ್ತಿದ್ದಾರೆ. ಕಳೆದ ಮೂರು ತಿಂಗಳಿಂದಲೂ ಲಕ್ಷಾಂತರ ಮಂದಿ 10 ರೂ ಗಳನ್ನು ನೀಡಿ ಕೂಪನ್ ನೀಡುತ್ತಲೇ ಇದ್ದು, ಇಲ್ಲಿಯವರೆಗೂ ಲಕ್ಷಾಂತರ ರೂ ಹಣ ಸಂಗ್ರಹವಾಗಿದೆ. ಆದ್ರೆ ಈಗ ಲಕ್ಕಿ ಬಹುಮಾನ ಏನೂ, ಎಷ್ಟೋ ಮಂದಿಗೆ ಬಹುಮಾನ ನೀಡುತ್ತಾರೆ ಎಂಬುದೇ ಪ್ರಶ್ನೆಯಾಗಿದೆ. ಅಲ್ಲದೆ ಸರ್ಕಾರದಿಂದ ಈ ರೀತಿ ಲಕ್ಕಿಡಿಪ್ ನಡೆಸಲು ಅನುಮತಿ ಸಹ ಪಡೆಯಬೇಕು. ಅಲ್ಲದೆ ಸರ್ಕಾರಿ ವಸ್ತು ಪ್ರದರ್ಶನದ ಅಧಿಕಾರಿಗಳಿಂದ ಅನುಮತಿ ಪಡೆಯಬೇಕು, ಆದರೆ ಇಲ್ಲಿ ಯಾವುದೇ ಅನುಮತಿ ಪಡೆಯದೇ ಹಗಲಲ್ಲೇ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ.