News Kannada
Wednesday, July 06 2022

ಮೈಸೂರು

ಬಿಜೆಪಿ ಜತೆ ಯಾವುದೇ ಹೊಂದಾಣಿಕೆ ಇಲ್ಲ: ದೇವೇಗೌಡ ಸ್ಪಷ್ಟನೆ - 1 min read

Photo Credit :

ಬಿಜೆಪಿ ಜತೆ ಯಾವುದೇ ಹೊಂದಾಣಿಕೆ ಇಲ್ಲ:  ದೇವೇಗೌಡ ಸ್ಪಷ್ಟನೆ

ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಜತೆ ಯಾವುದೇ ಹೊಂದಾಣಿಕೆಯಾಗಲಿ ಒಳ ಒಪ್ಪಂದವಾಗಲಿ ಮಾಡಿಕೊಂಡಿಲ್ಲ. ಮತದಾರರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದೆ ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಜೆಡಿಎಸ್ ವರಿಷ್ಟ ವಾಗ್ದಾಳಿ ನಡೆಸಿದ್ದಾರೆ.

ಒಂದೆರಡು ದಿನ ಇರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಕೇವಲ 24 ಗಂಟೆ ಬಾಕಿ ಇರುವಾಗಲೇ ಸೋಲಿನ ಭೀತಿಯಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದು, ಹಳೆ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ಗೆ ಉತ್ತಮ ಬೆಂಬಲ ಸಿಗುತ್ತಿದ್ದು, ಪರಿಷತ್ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಇನ್ನೂ ಎರಡು ರಾಷ್ಟ್ರೀಯ ಪಕ್ಷಗಳು  ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸುತ್ತಿದ್ದು, ನಮಗೆ ಆ ಶಕ್ತಿ ಇಲ್ಲ. ನಮ್ಮ ಪಕ್ಷಕ್ಕೆ ಸ್ವಂತ ಕಟ್ಟಡವೇ ತಗಡಿನೊಳಗಡೆ ಶೆಡ್ ಹಾಕಿಕೊಂಡಿದ್ದೇವೆ ಎಂದ ಅವರು ನಮ್ಮ ಪಕ್ಷದಿಂದ ಯಾವುದೇ ಶಾಸಕರು ಬೇರೆ ಪಕ್ಷಗಳನ್ನು ಸೇರುವ ಪ್ರಶ್ನೆ ಇಲ್ಲ. ಎಲ್ಲರೂ ಒಳ್ಳೆಯ ರೀತಿ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಮೋದಿಯವರು ಮೆಕ್ ಇಂಡಿಯಾವೆಂದು ವಿದೇಶಗಳಲ್ಲಿ ಸುತ್ತುವ ಬದಲು ನಮ್ಮ ದೇಶದ ಸಮಸ್ಯೆ ಕಡೆ ಗಮನ ಹರಿಸಬೇಕಾಗಿದೆ ಎಂದ ಅವರು, ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರಿಗೆ ಶುಭಾಷಯ ಕೋರಲು ಭೇಟಿಯಾಗುತ್ತಿರುವುದು ಒಳ್ಳೆಯದು ಎಂದರು.

See also  ತಪ್ಪು ಮಾಡಿದ್ರೆ ಶಿಕ್ಷೆ ಅಗಬೇಕು: ಬಿ ಸಿ ಪಾಟೀಲ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು