News Kannada

ಮೈಸೂರು

ಮಹಿಳೆಯರ ರಕ್ಷಣೆಗಾಗಿ ಆ್ಯಪ್ ಬಿಡುಗಡೆ - 1 min read

ಮಹಿಳೆಯರ ರಕ್ಷಣೆಗಾಗಿ ಆ್ಯಪ್ ಬಿಡುಗಡೆ

ಮೈಸೂರು: ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ, ಅತ್ಯಾಚಾರ ನಡೆಯುತ್ತಿದ್ದು, ಅವರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಆ್ಯಪ್ವೊಂದನ್ನು ಸಿದ್ಧಗೊಳಿಸಿದ್ದು, ಅತಿ ಶೀಘ್ರದಲ್ಲೇ ಆ್ಯಪ್ ಅನಾವರಣಗೊಳ್ಳಲಿದೆ ಎಂದು ಬೆಂಗಳೂರು ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹೇಳಿದರು.


ಲಾಗೈಡ್ ಪ್ರಪ್ರಥಮ ಕನ್ನಡ ಕಾನೂನು ಮಾಸಪ್ರತಿಕೆ ಕ್ಯಾಲೆಂಡರ್ ಮತ್ತು ಡೈರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇತ್ತೀಚೆಗೆ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರ, ದೌರ್ಜನ್ಯಗಳು ಜರುಗುತ್ತಿದ್ದು, ಇದನ್ನು ತಡೆಗಟ್ಟಿ ಮಹಿಳೆಯರಿಗೆ ರಕ್ಷಣೆ ಒದಗಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಆ್ಯಪ್ವೊಂದನ್ನು ರೂಪಿಸಿದೆ. ಇದರ ಮೂಲಕ ಮಹಿಳೆಯರು ದೂರು ದಾಖಲಿಸಬಹುದು ಎಂದು ತಿಳಿಸಿದರು.

ಹೊರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ತುಂಬಾ ಕಡಿಮೆ. ಆದರೆ, ಪೊಲೀಸರು ಎಷ್ಟೆ ನಿಷ್ಠೆಯಿಂದ ಶ್ರಮ ವಹಿಸಿ ಕೆಲಸ ಮಾಡಿದರೂ ಸಾರ್ವಜನಿಕರನ್ನು ತೃಪ್ತಿ ಪಡಿಸಲು ಸಾಧ್ಯವಾಗುತ್ತಿಲ್ಲ. ಆದರೂ ಆರಕ್ಷಕರಿಗೆ ತಾಳ್ಮೆ ಕಳೆದುಕೊಳ್ಳದೆ, ಸಹಾನುಭೂತಿಯಿಂದ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳು ಮೊದಲಿನಿಂದಲೂ ನಡೆಯುತ್ತಿದ್ದವು. ಆದರೆ, ಅವುಗಳನ್ನು ಬೆಳಕಿಗೆ ತಂದಿದ್ದು ಮಾಧ್ಯಮಗಳು. ಇದರಿಂದಾಗಿ ಐಪಿಸಿ ಸೆಕ್ಷನ್ನಲ್ಲಿ ಕೆಲವೊಂದು ತಿದ್ದುಪಡಿ ತಂದ ಬಳಿಕ ಇಂಥ ಪ್ರಕರಣಗಳಲ್ಲಿ ಸಿಲುಕಿಕೊಂಡ ಮಹಿಳೆಯರು ಧೈರ್ಯವಾಗಿ ಬಂದು ದೂರು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.

ವಸುಮತಿ ಹತ್ಯೆ ಪ್ರಕರಣ ಹಾಗೂ ಮೈಸೂರಿನಲ್ಲಿ ಅಪಹರಣಗೊಂಡ ಯುವತಿ ಶಫೀನಾ ಪ್ರಕರಣದ ತನಿಖೆ ನಡೆಯುತ್ತಿದ್ದು, ವೈಯಕ್ತಿಕವಾಗಿ ನಾನು ಪ್ರಕರಣದ ಬಗ್ಗೆ ಏನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು. ಲಾಗೈಡ್ ಸಂಸ್ಥೆಯು ಯುಪಿಎಸ್ಸ್ಸಿ, ಕೆಪಿಎಸ್ಸಿ ವಿದ್ಯಾರ್ಥಿಗಳಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದಾರೆ. ಅಲ್ಲದೆ, ಅನೇಕ ಮಂದಿಗೆ ಅನುಕೂಲವಾಗುವಂತೆ ಮಾರ್ಗದರ್ಶನ ನೀಡುವ ಮೂಲಕ ಕಾರ್ಯನಿರ್ವಹಿಸುತ್ತಿರುವುದು ಸಂತಸದ ವಿಷಯ ಎಂದರು.

ಇದೇ ಸಂದರ್ಭದಲ್ಲಿ ಕುಶಾಲನಗರ ಹಾರಂಗಿ ವಿಭಾಗೀಯ ಸೂಪರಿನ್ಟೆಂಡಟ್ ಇಂಜಿನಿಯರ್ ಮಹೇಶ್, ಬೆಂಗಳೂರು ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ನ್ಯಾಯಾಧೀಶ ಎಂ.ಮಹದೇವಯ್ಯ, ಜೆಎಸ್ಎಸ್ ಕಾನೂನು ಕಾಲೇಜು ಪ್ರಾಂಶುಪಾಲ ಕೆ.ಎಸ್.ಸುರೇಶ್, ಮೈಸೂರು ವಕೀಲರ ಸಂಘದ ಅಧ್ಯಕ್ಷ ಚಂದ್ರಮೌಳಿ, ವಕೀಲ ಲೋಕೇಶ್ ಇದ್ದರು.

ಲಾಗೈಡ್ ಪ್ರಪ್ರಥಮ ಕನ್ನಡ ಕಾನೂನು ಮಾಸಪ್ರತಿಕೆ ಕ್ಯಾಲೆಂಡರ್ ಮತ್ತು ಡೈರಿಯನ್ನು ಬೆಂಗಳೂರು ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಬಿಡುಗಡೆ ಮಾಡಿದರು.

See also  ಜೆಡಿಎಸ್ ಪ್ರಾಬಲ್ಯಕ್ಕೆ ತಡೆಯೊಡ್ಡಲು ಸಿಎಂ ಎಸಿಬಿ ಅಸ್ತ್ರ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು