News Kannada
Thursday, July 07 2022

ಮೈಸೂರು

ವೃದ್ಧನನ್ನು ಕತ್ತಲ ಬದುಕಿಗೆ ದೂಡಿದ ನಿರಾಶ್ರಿತರ ಕೇಂದ್ರ - 1 min read

Photo Credit :

ವೃದ್ಧನನ್ನು ಕತ್ತಲ ಬದುಕಿಗೆ ದೂಡಿದ ನಿರಾಶ್ರಿತರ ಕೇಂದ್ರ

ಮೈಸೂರು: ಸಿನಿಮಾ ನೋಡಲು ಬಂದ ವೃದ್ಧನನ್ನು ನಿರಾಶ್ರಿತರ ಕೇಂದ್ರಕ್ಕೆ ದೂಡಿ ಅನಾಥನನ್ನಾಗಿಸಿದ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.


ಕಳೆದ ವರ್ಷ ಅಂಬರೀಶ್ ಅಭಿನಯದ ಬುಲ್ ಬುಲ್ ಚಿತ್ರ ನೋಡಲು ಬಂದ ಮಂಡ್ಯ ಜಿಲ್ಲೆಯ ವೃದ್ಧನನ್ನು ಭಿಕ್ಷುಕನೆಂದು ಹಿಡಿದು ನಿರಾಶ್ರಿತರ ಕೇಂದ್ರಕ್ಕೆ ದೂಡಿದ ಅಧಿಕಾರಿಗಳು ಒಂದು ವರ್ಷ ಅಲ್ಲೇ ಸಜೆ ನೀಡಿ ಈಗ ಅನಾಥನ ರೀತಿ ಅವರನ್ನು ಹೊರ ಹಾಕಿರುವ ಅಮಾನವೀಯ ಘಟನೆ ಇದೀಗ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಮೈಷುಗರ್ಸ್ ಕಾರ್ಖಾನೆಯ ನಿವೃತ್ತ ನೌಕರನಾಗಿರುವ 70 ರ ವಯಸ್ಸಿನ ಜಯರಾಂ ಅವರೇ ನಿರಾಶ್ರಿತರ ಕೇಂದ್ರದಲ್ಲಿ ಒಂದು ವರ್ಷ ಸಜೆ ಅನುಭವಿಸಿ ಕೊನೆಗೆ ಅಲ್ಲೇ ಬಿದ್ದು ಸೊಂಟ ಮುರಿದು ಕೊಂಡು ಈಗ ಇತ್ತ ನಿರಾಶ್ರಿತರ ಕೇಂದ್ರವು ಇಲ್ಲ. ಅತ್ತ ಮನೆಯವರು ಸಂಪರ್ಕವು ಇಲ್ಲದಂತಾಗಿರುವ ನತದೃಷ್ಟರಾಗಿದ್ದಾರೆ.

ಜಯರಾಂ ಅವರು ಅಂಬರೀಶ್ ಅಭಿಮಾನಿಯಾಗಿದ್ದು ಅವರ ಅಭಿನಯದ ಬುಲ್ ಬುಲ್ ಸಿನಿಮಾನ ನೋಡಲು ಕಳೆದ ವರ್ಷ ಡಿಸೆಂಬರ್ ನಲ್ಲಿ ಮೈಸೂರಿಗೆ ಬಂದಿದ್ದರು. ನಗರದ ಶಾಂತಲಾ ಚಿತ್ರಮಂದಿರದಲ್ಲಿ ಚಿತ್ರ ನೋಡಿಕೊಂಡು ನಂಜನಗೂಡಿನ ನಂಜುಂಡೇಶ್ವರನಿಗೆ ಮುಡಿ ಹರಕೆ ತೀರಿಸಲು ಹೊರಟ್ಟಿದ್ದರು. ಆದರೆ ಶಾಂತಲಾ ಚಿತ್ರ ಮಂದಿರದ ಎದುರು ನಿರಾಶ್ರಿತರ ಕೇಂದ್ರದವರು ದಾಳಿ ನಡೆಸುತ್ತಿದ್ದಾಗ ಇವರನ್ನು ಭಿಕ್ಷುಕರೆಂದು ಭಾವಿಸಿ ಅವರನ್ನು ಎಳೆದೊಯ್ಯಿದಿದ್ದಾರೆ. ನಾನು ಭೀಕ್ಷಕುನಲ್ಲ ನಾನೊಬ್ಬ ನಿವೃತ್ತ ನೌಕರ ಎಂದು ಎಷ್ಟೇ ಪರಿ ಪರಿಯಾಗಿ ಬೇಡಿಕೊಂಡರು ಬೀಡದಂತೆ ಜಯರಾಂ ಅವರನ್ನು ಎಳೆದೊಯ್ದು ಗಾಯತ್ರಿಪುರಂ ನಿರಾಶ್ರಿತ ಕೇಂದ್ರಕ್ಕೆ ಬಿಟ್ಟಿದ್ದಾರೆ. ಅಲ್ಲೂ ಸಹ ಇವರನ್ನು ವಿವಸ್ತ್ರಗೊಳಿಸಿ ಹಿಂಸೆ ನೀಡಿ ಕೊನೆಗೆ ಸರಿಯಾದ ವ್ಯವಸ್ಥೆಯನ್ನೇ ಕಲ್ಪಿಸದೇ ಬಂಧಿಸಿದ್ದಾರೆ. ಈ ವೇಳೆ ಅಲ್ಲಿ ನಡೆದಾಡಬೇಕಾದರೆ ಬಿದ್ದು ಸೊಂಟ ಸಹ ಪೆಟ್ಟು ಮಾಡಿಕೊಂಡಿದ್ದಾರೆ. ಈ ವೇಳೆ ನಿರಾಶ್ರಿತರ ಕೇಂದ್ರ ವರ್ಷದ ಬಳಿಕ ಅವರನ್ನು ಹೊರಗೆ ಬಿಟ್ಟಿದೆ. ಈ ಒಂದು ವರ್ಷದ ಅವಧಿಯಲ್ಲಿ ನಮ್ಮ ಮನೆಯನ್ನು ಸಂಪರ್ಕಿಸುವಂತೆ ಅವಕಾಶ ಕಲ್ಪಿಸಿಕೊಡಿ ಎಂದು ಕೇಳಿಕೊಂಡರೂ ಅಧಿಕಾರಿಗಳು ಇವರ ಮಾತಿಗೆ ಕಿಂಚಿತ್ತು ಬೆಲೆ ಕೊಟ್ಟಿಲ್ಲ.

ಜಯರಾಂ ಅವರು ಗಾಬರಿಗೊಂಡಿದ್ದು ಮಾತ್ರವಲ್ಲದೆ ಭಯಭೀತರಾಗಿದ್ದಾರೆ.  ಸದ್ಯಕ್ಕೆ ಚೆನ್ನಾಗಿದ್ದಾಗಲೇ ನಿರಾಶ್ರಿತರ ಕೇಂದ್ರ ಸೇರಿ ಸೊಂಟ ಮುರಿದುಕೊಂಡು ಬೀದಿಪಾಲಾಗಿರುವ ಅವರು ಈಗ ತಮ್ಮ ಜೀವನಾಧಾರಕ್ಕೆ ಅಂಗಲಾಚಿದ್ದಾರೆ. ನಿರಾಶ್ರಿತ ಕೇಂದ್ರದವರ ಅಲ್ಪ ದುಡುಕಿನಿಂದ ಜಯರಾಂ ಅವರ ಜೀವನವೇ ಕತ್ತಲಾಗಿದೆ.

See also  ಯಳಂದೂರು ರಸ್ತೆಗೆ ಹಣ ಬಿಡುಗಡೆಯಾಗಿ 5 ವರ್ಷವಾದ್ರೂ ರಸ್ತೆ ಭಾಗ್ಯ ಇಲ್ಲ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು