ಮೈಸೂರು: ವಿಧಾನ ಪರಿಷತ್ ಚುನಾವಣೆ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತ ಎಣಿಕೆ ಕಾರ್ಯ ಮೈಸೂರಿನ ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನಲ್ಲಿ ಬೆಳ್ಳಗ್ಗೆ 8 ರಿಂದಲೇ ಆರಂಭವಾಗಿದೆ.
ಸಿಎಂ ಅವರ ತವರು ಕ್ಷೇತ್ರವಾದ ಮೈಸೂರು-ಚಾಮರಾಜನಗರ ದ್ವಿಸದಸ್ಯತ್ವ ಕ್ಷೇತ್ರಕ್ಕೆ ಮೂರು ಪಕ್ಷಗಳಿಂದ ಪ್ರಬಲ ಪೈಪೋಟಿಯ ಚುನಾವಣೆ ನಡೆದಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲೇ ಮತ ಎಣೆಕೆ ಕಾರ್ಯ ಆರಂಭವಾಗಿದೆ. ಬೆಳ್ಳಗ್ಗೆ 7.30 ಕ್ಕೆ ಮೈಸೂರು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿರುವ ಸಿ.ಶಿಖಾ ಜೆಎಸ್ಎಸ್ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಬೆಳ್ಳಗ್ಗೆ 7.45 ಕ್ಕೆ ಮತಗಟ್ಟೆ ಇಟ್ಟಿರುವ ಸ್ಟ್ರಾಂಗ್ ರೂಂ ನ್ನು ತೆರೆಯಲಾಯಿತು. 14 ಟೇಬಲ್ ಗಳಲ್ಲಿ 25 ಸುತ್ತಿನ ಮತ ಎಣಿಕೆ ನಡೆಯಲಿದ್ದು ಮಧ್ಯಾಹ್ನದ ವೇಳೆಗೆ ಫಳಿತಾಂಶ ಹೊರ ಬೀಳಲಿದೆ.
ಸದ್ಯಕ್ಕೆ ಮೈಸೂರು- ಚಾಮರಾಜನಗರ ದ್ವಿಸದಸ್ಯತ್ವ ಕ್ಷೇತ್ರದಲ್ಲಿ ಒಟ್ಟು 7607 ಮತದಾರರ ಪೈಕಿ 7597 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವುಗಳ ಮತ ಎಣಿಕೆ ಆರಂಭವಾಗಿದೆ. ಮತಗಟ್ಟೆ ಸುತ್ತಲು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
10.30 ಕ್ಕೆ ಮತ ಎಣಿಕೆ ಆರಂಭಗೊಂಡಿದ್ದು, ಮೊದಲ ಸುತ್ತಿನ ಮತ ಎಣಿಕೆ ಕಾರ್ಯದಲ್ಲಿ ಕಾಂಗ್ರೆಸ್ ನ ಆರ್ ಧರ್ಮಸೇನಾ ಅಲ್ಪ ಮತಗಳಿಂದ ಮುನ್ನಡೆಯಲಿದ್ದು, ಎರಡನೇ ಸ್ಥಾನದಲ್ಲಿ ಜೆಡಿಎಸ್ ಮೂರನೇ ಸ್ಥಾನದಲ್ಲಿ ಬಿಜೆಪಿ ಪೈಪೋಟಿ ನೀಡಿದೆ.