News Kannada
Tuesday, July 05 2022

ಮೈಸೂರು

ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿದ ಕಳ್ಳರು - 1 min read

Photo Credit :

ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿದ ಕಳ್ಳರು

ಮೈಸೂರು: ವಿಳಾಸ ಕೇಳುವ ನೆಪದಲ್ಲಿ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮನೆ ಮುಂದೆ ಹೂ ಕೀಳುತ್ತಿದ್ದ ವೃದ್ಧೆಯನ್ನು ವಿಳಾಸ ಕೇಳುವ ನೆಪದಲ್ಲಿ ಕರೆದು ಚಿನ್ನದ ಸರವನ್ನೇ ಎಗರಿಸಿದ ಕಳ್ಳರೀಗ ಸಿಸಿಟಿವಿಯಲ್ಲಿ ಸೆರೆಸಿಕ್ಕಿದ್ದು, ಕದ್ದ ಗಾಬರಿಯಲ್ಲಿ ದಾರಿ ತಿಳಿಯದೇ ಬೈಕ್ ನಲ್ಲಿ ತಿರುವು ಪಡೆಯುತ್ತಿರುವ ದೃಶ್ಯ ಈಗ ಸೆರೆಯಾಗಿದೆ. ಮೈಸೂರಿನಲ್ಲಿ ಸರಣಿ ಕಳ್ಳತನವ ನಡೆಯುತ್ತಲೇ ಇದ್ದು ಅದರಲ್ಲೂ ವೃದ್ಧ ಮಹಿಳೆಯರನ್ನೇ ಕಳ್ಳರು ಟಾರ್ಗೆಟ್ ಮಾಡಿದ್ದಾರೆ. ನಗರದ ಬೋಗಾದಿಯ 2 ನೇ ಹಂತದ ನಿರ್ಮಿತಿ ಕೇಂದ್ರದ ಬಳಿ ಸಿದ್ದೇಶ್ವರ ಬಡವಾಣೆಯ ಮುಂಭಾಗ 74 ವರ್ಷದ ಸಾವಿತ್ರಮ್ಮ ಹೂ ಕೀಳುತ್ತಿದ್ದರು. ಈ ವೇಳೆ ಕಪ್ಪು ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಸರಗಳ್ಳರು ಆಕೆಯಲ್ಲಿ ವಿಳಾಸ ಕೇಳಿದ್ದಾರೆ.

ವಿಳಾಸ ಹೇಳಲು ಮುಂದೆ ಬಂದ ವೃದ್ಧೆಯಿಂದ 90 ಗ್ರಾಂ ಮಾಂಗಲ್ಯ ಸರ ಕಸಿದಿದ್ದಾರೆ. ಆದರೆ ಕದ್ದ ಗಾಬರಿಯಲ್ಲಿ ಮುಂದೆ ಹೋಗಿ ದಾರಿ ಕಾಣದೇ ತಿರುವು ಪಡೆದುಕೊಂಡು ಹೋಗುತ್ತಿರುವ ದೃಶ್ಯವೀಗ ಸಿಸಿಟಿವಿಯಲ್ಲಿ ಸೆರೆಯಾಗುವ ಮೂಲಕ ಅವರ ಪತ್ತೆಗೆ ಸುಳಿವು ನೀಡಿದೆ. ಕಪ್ಪು ಪಲ್ಸರ್ ಬೈಕ್ ನಲ್ಲಿ ತಿರುವು ಪಡೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಸರಸ್ವತಿಪುರಂ ಪೊಲೀಸ್ ಠಾಣೆಯ ಪೊಲೀಸರು ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಆರೋಪಿಗಳ ಸೆರೆಗೆ ಮುಂದಾಗಿದ್ದಾರೆ.

See also  ನಿವೃತ್ತ ಪ್ರೊಫೆಸರ್ ರಾಮ ಪ್ರಸಾದ್ ರವರಿಂದ ಮುಂದಿನವಾರ ಕುಕ್ಕರಹಳ್ಳಿ ಕೆರೆ ಸ್ಥಳ ಪರಿಶೀಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು