News Kannada
Thursday, July 07 2022

ಮೈಸೂರು

ಮೇಲ್ಮನೆ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಜೆಡಿಎಸ್ ಗೆಲುವು - 1 min read

Photo Credit :

ಮೇಲ್ಮನೆ ಚುನಾವಣೆ ಫಲಿತಾಂಶ: ಕಾಂಗ್ರೆಸ್ ಜೆಡಿಎಸ್ ಗೆಲುವು

ಮೈಸೂರು: ಮೈಸೂರು- ಚಾಮರಾಜನಗರ ದ್ವಿಸದಸ್ಯದ ಕ್ಷೇತ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಒಂದೊಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್  ಧರ್ಮಸೇನಾ, ಜೆಡಿಎಸ್ ನ ಸಂದೇಶ್ ನಾಗರಾಜ್ ಮೊದಲ ಸುತ್ತಿನಲ್ಲೇ ಗೆಲುವು ಸಾಧಿಸಿದ್ದಾರೆ. 11 ಮತಗಳಿಸಿ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಗೆ ತೀವ್ರ ಮುಖಭಂಗವಾಗಿದೆ.

MLC polls: Congress, JD(S) win twin seats in Mysuru-1
ಇಂದು ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್ಎಸ್ ಕಾಲೇಜಿನಲ್ಲಿ ನಡೆದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧರ್ಮಸೇನಾ 3094 ಮತಗಳನ್ನು ಪಡೆದು ವಿಜಯಶಾಲಿಯಾದರೆ, ನಂತರ ಎರಡನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಜೆಡಿಎಸ್ನ ಸಂದೇಶ್ ನಾಗರಾಜ್ 2247 ಮತಗಳನ್ನು ಪಡೆದು ವಿಜಯಿಯಾಗಿದ್ದಾರೆ. ಈ ಸಂಧರ್ಭದಲ್ಲಿ ಕಾಂಗ್ರೆಸ್ ಗೆಲುವಿನ ಅಭ್ಯರ್ಥಿ ಧರ್ಮಸೇನಾ ಮಾತನಾಡಿ ನನ್ನ ಗೆಲವುವಿಗೆ ಸಿದ್ಧರಾಮಯ್ಯನವರೇ ಕಾರಣ. ಶಾಸಕರು, ಸಚಿವರು ಎಲ್ಲಿಯೂ ಹೋಗದೆ ನನ್ನ ಗೆಲುವಿಗಾಗಿ ಕ್ಷೇತ್ರದಲ್ಲಿ ಶ್ರಮಿಸಿದ್ದೇ ನನ್ನ ಗೆಲುವಿಗೆ ಕಾರಣ ಎಂದರು.

ನಾನು 4500 ಮತಗಳ ಅಂತರದಿಂದ ಗೆಲುವು ಸಾಧಿಸಬೇಕಿತ್ತು. ಇಷ್ಟೂ ಕಡಿಮೆ ಮತಗಳ ಅಂತರ ಬರಲು ಸ್ಥಳೀಯ ಜೆಡಿಎಸ್ ಮುಖಂಡರೇ ಕಾರಣ, ವೈಯುಕ್ತಿಕ ವರ್ಚಸ್ಸಿನಿಂದ ಕಡಿಮೆ ಅಂತರದಲ್ಲಿ ವಿಜಯಶಾಲಿಯಾಗಿದ್ದೇನೆ. ಈ ಬಗ್ಗೆ ಜೆಡಿಎಸ್ ವರಿಷ್ಠರಿಗೆ ದೂರು ನೀಡುತ್ತೇನೆ. ಪಕ್ಷದಿಂದ ನನ್ನನ್ನು ಉಚ್ಛಟಿಸಿದರೂ ಪರವಾಗಿಲ್ಲ ಜೆಡಿಎಸ್ ಸ್ಥಳೀಯ ಮುಖಂಡರು ವೈಯುಕ್ತಿಕ ವರ್ಚಸ್ಸಿಗೆ ಜಿಲ್ಲೆಯಲ್ಲಿ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ ಎಂದು ತಮ್ಮ ಪಕ್ಷದ ಮುಖಂಡರ ವಿರುದ್ಧ ಗರಂ ಆಗಿ ಕಿಡಿಕಾರಿದರು.

See also  ಕೊಳ್ಳೇಗಾಲದ ಬಳಿ ಮರ್ಯಾದಾ ಹತ್ಯೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು