News Kannada

ಮೈಸೂರು

ಲೈಂಗಿಕ ಕಿರುಕುಳ ನೀಡುತ್ತಿದ್ದ ಹೆಡ್ ಮಾಸ್ಟರ್ ಗೆ ಸಖತ್ ಗೂಸ - 1 min read

 ಲೈಂಗಿಕ ಕಿರುಕುಳ ನೀಡುತ್ತಿದ್ದ ಹೆಡ್ ಮಾಸ್ಟರ್ ಗೆ ಸಖತ್ ಗೂಸ

ಮೈಸೂರು: ಶಾಲಾ ಹೆಡ್ ಮಾಸ್ಟರ್ ನೊಬ್ಬ ಪಾಠದ ಜತೆ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ವಿಷಯ ತಿಳಿದ ಪೋಷಕರು ಮಾಸ್ಟರ್ ನನ್ನು ಕೊಠಡಿಯಲ್ಲಿ ಕೂಡಿ ಹಾಕಿ ಗೂಸ ನೀಡಿದ ಘಟನೆ ಮೈಸೂರಿನ ಸಿದ್ಧಲಿಂಗಪುರದಲ್ಲಿ ನಡೆದಿದೆ.

Headmaster gets thrashed in public for misbehaving with girl students-1
ಮೈಸೂರಿನ ಸಿದ್ದಲಿಂಗಪುರ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ರಾಮಮೂರ್ತಿ(59) ಗೂಸ ತಿಂದ ವ್ಯಕ್ತಿ.  ಇನ್ನೂ ಒಂದು ವರ್ಷದಲ್ಲಿ ನಿವೃತ್ತಿ ಹೊಂದಿ ಮೊಮ್ಮಕ್ಕಳನ್ನು ಆಡಿಸಬೇಕಾದವ ಮೊಮ್ಮಕ್ಕಳ ವಯಸ್ಸಿನ ಶಾಲಾ ವಿದ್ಯಾರ್ಥಿನಿಯರಿಗೆ ಲೈಗಿಂಕ ಕಿರುಕುಳ ನೀಡಿ ಗೂಸಾ ತಿಂದಿದ್ದಾನೆ. ಪಾಠ ಹೇಳಿಕೊಡುತ್ತಿದ್ದ ಸಂದರ್ಭ ಆತ ವಿದ್ಯಾರ್ಥಿಗಳ ಜತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈತನ ಕಿರುಕುಳವನ್ನು ತಾಳಲಾರದೆ ವಿದ್ಯಾರ್ಥಿನಿಯರು ಪೋಷಕರಿಗೆ ಹಾಗೂ ಇತರ ಶಿಕ್ಷಕರಿಗೆ ವಿಷಯವನ್ನು ತಿಳಿಸಿದರು. ಆಕ್ರೋಶಗೊಂಡ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಿದರು. ಅಂದು ಹೆಡ್ ಮಾಸ್ಟರ್ ಶಾಲೆಗೆ ಹಾಜರಾಗಿರಲಿಲ್ಲ. ವಿಷಯ ತಿಳಿದ ನಂತದ ಹೆಡ್ ಮಾಸ್ಟರ್ ಪೋಷಕರ ಮನೆಗೆ ಹೋಗಿ ಕ್ಷಮೆ ಕೇಳಲು ಹೋದಾಗ ಕುಪಿತಗೊಂಡ ಪೋಷಕರು ಆತನನ್ನು ಕೊಠಡಿಯಲ್ಲೇ ಕೂಡಿಹಾಕಿ ಸಖತ್ ಗೂಸಾ ನೀಡಿ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬಿಇಓ ಸ್ಥಳದಲ್ಲೇ ಕಾಮುಕ ಹೆಡ್ಮಾಸ್ಟರ್ ನನ್ನು ಅಮಾನತಗೊಳಿಸಿ ಎಂದು ಆದೇಶ ಹೊರಡಿಸಿದರು.

See also  ಅಮೃತತುಲ್ಯ ಚಹಾ ಸವಿದಿಲ್ಲವೆ? ಹಾಗಿದ್ದರೆ ಮೈಸೂರಿಗೆ ಬನ್ನಿ...
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು