ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರವಾಸಿ ಸ್ಥಳಗಳಿಗೆ ಹೈಟೆಕ್ ರೋಟೆಲ್ ಬಸ್ ನಿಂದ ಸಂಚಾರ ಮಾಡಿದ ಜರ್ಮನ್ ಪ್ರವಾಸಿಗರು ನೂತನ ವರ್ಷಾಚರಣೆ ಮಾಡಿ ಸಂಭ್ರಮಪಟ್ಟರು.
ದೇಶ-ವಿದೇಶಗಳಿಂದ ಅನೇಕ ಪ್ರವಾಸಿಗರು ಮೈಸೂರಿನ ನಾನಾ ಹೋಟೆಲ್ ಗಳಲ್ಲಿ ತಂಗಿ ನೂತನ ವರ್ಷಾಚರಣೆ ಮಾಡುವುದು ಸಾಮಾನ್ಯ. ಆದರೆ ಜರ್ಮನ್ ಮೂಲದ ಪ್ರವಾಸಿ ಕಂಪನಿಯ ಹೈಟೆಕ್ ರೋಟೆಲ್ ಬಸ್ ಮೂಲಕ ಪ್ರಮುಖ ಪ್ರವಾಸಿ ತಾಣಗಳನ್ನು ವಿಕ್ಷಿಸಿ. ಮೈಸೂರಿನಲ್ಲಿಯೇ ಹೊಸ ವರ್ಷಾಚರಣೆ ಮಾಡಿರುವುದು ವಿಶೇಷ.
15 ದಿನಗಳ ಹಿಂದೆಷ್ಟೆ ಭಾರತಕ್ಕೆ ಆಗಮಿಸಿರುವ ಜರ್ಮನ್ ಪ್ರವಾಸಿಗರು. ರೋಟೆಲ್ ಬಸ್ ನಲ್ಲಿ ಚೆನ್ನೈ ಪ್ರವಾಸದ ನಂತರ ತಂಜವೂರು, ಮಹಾಬಲಿಪುರಂ, ಕೊಚ್ಚಿ, ಊಟಿಯನ್ನು ಸುತ್ತಾಡಿ ಅಲ್ಲಿಂದ ನಿನ್ನೆ ರಾತ್ರಿ ಮೈಸೂರಿಗೆ ಆಗಮಿಸಿರುವ ಪ್ರವಾಸಿಗರು, ಇಲ್ಲಿಂದ ಹಾಸನದ ಪ್ರಮುಖ ಪ್ರವಾಸಿ ತಾಣ ವೀಕ್ಷಣೆ ಮಾಡಿ ಅಲ್ಲಿಂದ ಬೆಂಗಳೂರು ತಲುಪಿ ವಾಪಸ್ ಜರ್ಮನಿ ಪ್ರಯಾಣ ಬೆಳಸಲಿದ್ದಾರೆ ಪ್ರವಾಸಿಗರು.
ಜರ್ಮನ್ ನಿರ್ಮಿತ ಈ ಹೈಟೆಕ್ ರೋಟೆಲ್ ಬಸ್ ನಲ್ಲಿ ಸ್ವೀಪರ್ ವ್ಯವಸ್ಥೆ ಜತೆ ಶೌಚಾಲಯ, ಸಣ್ಣ ಮೊಬೈಲ್ ಬಾರ್ ವ್ಯವಸ್ಥೆಯೂ ಇದೆ ಹಾಗೂ ಪ್ರವಾಸಿ ಕೈಗೊಳ್ಳುವ ಪ್ರವಾಸಿಗರಿಗೆ ಊಟ, ವಸತಿ ಎಲ್ಲ ಸೌಕರ್ಯಗಳನ್ನು ಬಸ್ ಕಂಪನಿ ನೀಡಲಿದೆ. ಜರ್ಮನ್ ಮೂಲದ ರೋಟೆಲ್ ಟೂರ್ಸ್ ಕಂಪನಿ ಪ್ರಪಂಚದ 60ಕ್ಕೂ ಹೆಚ್ಚು ತಾಣಗಳಲ್ಲಿ ಪ್ರವಾಸೋದ್ಯಮ ನಡೆಸಿ ಕೊಂಡು ಬಂದಿದೆ. ಈ ಬಾರಿ ಜರ್ಮನಿನಿಂದ 16ಮಂದಿ ಪ್ರವಾಸ ಮಾಡಿ ಅನೇಕ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಖುಷಿಪಟ್ಟಿದ್ದಾರೆ. ಇಂತಹ ಸೌಂದರ್ಯ ನೋಡಲು ನಮಗೆ ಖುಷಿಯಾಗುತ್ತದೆ ಎನ್ನುತ್ತಾರೆ ರೋಟೆಲ್ ಟೂರ್ಸ್ ನ ಗೈಡ್ ರೈನರ್.