News Kannada
Wednesday, July 06 2022

ಮೈಸೂರು

ಮೈಸೂರು ನಗರಕ್ಕೆ ಪಿಎಂ: ಮೈಸೂರಿನಾದ್ಯಂತ ಹೈ ಅಲರ್ಟ್ - 1 min read

Photo Credit :

ಮೈಸೂರು ನಗರಕ್ಕೆ ಪಿಎಂ: ಮೈಸೂರಿನಾದ್ಯಂತ ಹೈ ಅಲರ್ಟ್

ಮೈಸೂರು:  ನ್ಯೂ ಇಯರ್ ಜಂಜಾಟ ಮುಗಿಸಿ ಎಲ್ಲೆಡೆ ಪೊಲೀಸರು ಕೊಂಚ ರಿಲ್ಯಾಕ್ಸ್ ನತ್ತ ಹೋಗುತ್ತಿದ್ದರೆ, ಮೈಸೂರಿನ ಪೊಲೀಸರಿಗೆ ರಿಲ್ಯಾಕ್ಸ್ ಇಲ್ಲದಂತಾಗಿದೆ. ಏಕೆಂದರೆ ಇಂದು ಮೋದಿ ಪ್ರವಾಸ ಕೈಗೊಂಡಿದ್ದು ಇಂದಿನಿಂದಲೇ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.


ಇಂದು ಸಂಜೆ ಮೋದಿ ಮೈಸೂರು ನಗರಕ್ಕೆ ಆಗಮಿಸಿ ಇಲ್ಲೇ ವಾಸ್ತವ್ಯ ಹೂಡಿ ನಾಳೆ ವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಳಿಕ ಹಿಂದಿರುಗಲಿದ್ದಾರೆ. ಈಗಾಗಲೇ ಪ್ರಧಾನಿ ಬರುವ ಮಾರ್ಗಸೂಚಿಯೂದಕ್ಕೂ ನಿರ್ಬಂಧ ವೇಳಾಪಟ್ಟಿಯನ್ನು ತಿಳಿಸಲಾಗಿದ್ದು, ಸಂಚಾರ ನಿರ್ಬಂಧ ಸೇರಿದಂತೆ ಹಲವು ನಿರ್ಬಂಧನೆಗಳನ್ನು ಹೇರಲಾಗಿದೆ. ಅಷ್ಟೂ ಮಾತ್ರವಲ್ಲದೆ ಈಗಾಗಲೇ ಬೆಂಗಳೂರು, ಹಾಸನ, ಮಂಡ್ಯ, ಚಾಮರಾಜನಗರಗಳಿಂದಲೂ ಹೆಚ್ಚಿನ ಪೊಲೀಸರನ್ನು ಬಳಸಿಕೊಂಡು ಬಿಗಿ ಭದ್ರತೆಗೆ ನಿಯೋಜಿಸಲಾಗಿದೆ.

ಇಂದು ಸಂಜೆ 4 ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮೋದಿಯವರು ಆಗಮಿಸಿಸಲಿದ್ದು, ಅಲ್ಲಿಂದ ನೇರವಾಗಿ ನಂಜನಗೂಡು ರಸ್ತೆ ಮೂಲಕ ಗಣಪತಿ ಸಚ್ಚಿದಾನಂದ ಆಶ್ರಮ ಅದಾದ ಬಳಿ ಲಲಿತ್ ಮಹಲ್ ಹೋಟೆಲ್ ಮಾರ್ಗವನ್ನು ನಿರ್ಬಂಧಿಸಲಾಗಿದೆ. ನಾಳೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7.30 ರವರೆಗೆ ಮೇಲಿನ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಬದಲಿ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ಜನವರಿ 3 ರಂದು ಬೆಳ್ಳಗ್ಗೆ 9 ರಿಂದ ಮಧ್ಯಾಹ್ನ 1.30 ರವರೆಗೂ ಪ್ರಧಾನಿಯವರು ಸಂಚರಿಸುವ ಲಲಿತ್ ಮಹಲ್ ರಸ್ತೆ ಟ್ರಕ್ ಟರ್ಮಿನಲ್ ರಸ್ತೆ, ಜೆಎಲ್ ಬಿ ರಸ್ತೆ, ರಾಮಸ್ವಾಮಿ ವೃತ್ತ ಮಾರ್ಗದ ಸರಸ್ವತಿಪುರಂ ಫೈರ್ ಬ್ರಿಗೇಡ್ ಬೋಗಾದಿ ಮಾನಸ ಗಂಗೋತ್ರಿ ಬಯಲು ರಂಗ ಮಂದಿರ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಅಲ್ಲದೆ ಮಾನಸ ಗಂಗೋತ್ರಿ ಬಯಲು ರಂಗ ಮಂದಿರದಿಂದ ನಂಜನಗೂಡು ರಸ್ತೆಯ ಮಾರ್ಗವಾಗಿ ಮಂಡಕಳ್ಳಿ ವಿಮಾನ ನಿಲ್ದಾಣದವರೆಗೂ ಮಧ್ಯಾಹ್ನ 1.30 ರವರೆಗೆ ಸಂಚಾರ ನಿರ್ಭಂದಿಸಲಾಗಿದೆ. ಭದ್ರತೆ ದೃಷ್ಟಿಯಿಂದ ರಸ್ತೆ ಬಂದ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ 5 ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ಬಿಗಿ ಪೊಲೀಸ್ ಭದ್ರತೆಗೆ ನಿಯೋಜಿಸಲಾಗಿದ್ದು ಪ್ರಧಾನಿ ಮೋದಿಯವರ ಕಾರ್ಯಕ್ರಮಗಳಿಗೂ ಸಹ ನಿಗದಿತ ಸ್ಥಳದಲ್ಲೇ ಪಾರ್ಕಿಂಗ್ ಮಾಡುವಂತೆ ಆದೇಶಿಸಲಾಗಿದೆ.
 

See also  ಅಪೊಲೋ ಬಿಜಿಎಸ್ ಆಸ್ಪತ್ರೆಯ ವತಿಯಿಂದ ಗರ್ಭಿಣಿ ಸ್ತ್ರೀಯರಿಗೆ ಉಚಿತ ಆರೋಗ್ಯ ತಪಾಸಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು