News Kannada
Tuesday, July 05 2022

ಮೈಸೂರು

ಮೈಸೂರಲ್ಲಿ ಮೋದಿ ಮನದ ಮಾತು - 1 min read

Photo Credit :

ಮೈಸೂರಲ್ಲಿ ಮೋದಿ ಮನದ ಮಾತು

ಮೈಸೂರು: “ಮೈಸೂರಿನ ಪ್ರೀತಿಯ ಬಂಧು ಭಗಿನಿಯರೇ ನಿಮಗೆಲ್ಲಾ ನಮಸ್ಕಾರ” ಎಂದು ಕನ್ನಡದಲ್ಲೇ ನಮಸ್ಕರಿಸಿ ಮಾತು ಆರಂಭಿಸಿದ ಮೋದಿ ಕರ್ನಾಟಕ ಸಮಾಜ ಸುಧಾರಕರ ಪೂಣ್ಯಭೂಮಿ, ದೇಶದ ಸಾಂಸ್ಕೃತಿಕ ಸಿರವಂತಿಕೆಯ ಆಗರ ಭೂಮಿ ಇದಾಗಿದೆ ಎಂದು ರಾಜ್ಯವನ್ನು ಹೊಗಳಿದರು.

ಮುಂದುವರೆದು ನನ್ನ ಮಾತಿನ ಕನ್ನಡ ಅನುವಾದ ಬೇಕಾಗಿಲ್ಲ ಅಂದುಕೊಂಡಿದ್ದೇನೆ. ಸಮಾಜ ಸುಧಾರನ್ನು ದೇಶಕ್ಕೆ ನೀಡಿದ ಪುಣ್ಯಭೂಮಿ ಇದಾಗಿದ್ದು, ಬಸವಣ್ಣನವರು ನುಡಿದಂತೆ ನಡೆದವರು. ಮೊನ್ನೆ ಇಂಗ್ಲೆಂಡ್  ಸಮಾಜ ಸುಧಾರಕ ಬಸವಣ್ಣನವರ ಪ್ರತಿಮೆ ಅನಾವರಣ ಮಾಡಿದ ಖುಷಿ ಇದೆ. ಇಂದು ಅವರ ನೆಲಕ್ಕೆ ಬಂದಿರುವುದು ಸಂತಸ ತಂದಿದ್ದು ಇದು ನನ್ನ ಪುಣ್ಯ ಎಂದರು.

ದೇಶದ ಸ್ವಾತಂತ್ರ್ಯದಲ್ಲಿ ಕರ್ನಾಟಕದ ಸಂತರ ಕೊಡುಗೆ ಅಪಾರ ಎಂದರು. ದೆಹಲಿಯಿಂದ ವಿಶೇಷ ವಿಮಾನ ಮೂಲಕ ಸಂಜೆ 5.20 ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಮೊದಲಿಗೆ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಆಶ್ರಮದ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸಿ ವಂದಿಸಿದರು.

ಬಳಿಕ ಸ್ವಾಮೀಜಿಗಳನ್ನು ಸತ್ಕರಿಸಿ ವಂದಿಸಿ ಬಳಿಕ ಮಾತನಾಡಿ ಮೋದಿ ನಮ್ಮ ದೇಶದ ಪುರತಾನ ಆಶ್ರಮಗಳು ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿವೆ ಅವು ನಮ್ಮ ಕಣ್ಣಿಗೆ ಕಾಣಿಸುತ್ತಿಲ್ಲ ಅಷ್ಟೇ, ನಮ್ಮ ಸಾಮಾಜಿಕ ಅಭಿವೃದ್ದಿಗೆ ಮಠ ಪರಿಶ್ರಮ ಶ್ಲಾಘನೀಯವೆಂದರು.

See also  ಸಾಲಕ್ಕೆ ಹೆದರಿ ತನ್ನ ರಿಕ್ಷಾದಲ್ಲೇ ಆತ್ಮಹತ್ಯೆಗೆ ಶರಣಾದ ಚಾಲಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು