ಮೈಸೂರು: ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ವಿಜ್ಞಾನಿಗಳ ಸಮ್ಮುಖದಲ್ಲಿ ದೇಶದ ಪ್ರಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವೇದಿಕೆಯಲ್ಲಿ ಪ್ರಮುಖ ಭಾಷಣ ಮಾಡುತ್ತಿರುವಾಗ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ನಿದ್ರೆಗೆ ಜಾರಿದರು.
ಸಿಎಂ ಸಿದ್ಧರಾಮಯ್ಯ ಇಂದು ಮೈಸೂರಿನ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆಯುತ್ತಿದ್ದ 103 ನೇ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಮತ್ತೆ ನಿದ್ರೆಗೆ ಜಾರಿ ಅಪಹಾಸ್ಯಕ್ಕೀಡಾದರು. ವಿಜ್ಞಾನ ಸಮಾವೇಶದಲ್ಲಿ ನೂರಾರು ವಿಜ್ಞಾನಿಗಳು, ಸಾವಿರಾರು ಮಂದಿ ದೇಶ- ವಿದೇಶದ ವಿಜ್ಞಾನದ ವಿದ್ಯಾರ್ಥಿಗಳು ಭಾಗವಹಿಸಿ ಅತಿ ಕಾತುರದಿಂದ ಪ್ರಧಾನಿ ಮೋದಿಯವರ ಪ್ರಮುಖ ಭಾಷಣ ಆಲಿಸುತ್ತಿದ್ದರೆ, ಮುಖ್ಯ ವೇದಿಕೆಯ ಮೇಲೆ ಕುಳಿತಿದ್ದ ಗಣ್ಯಾತೀ ಗಣ್ಯರ ಪೈಕಿ ಸಿಎಂ ಸಿದ್ದರಾಮಯ್ಯ ನಿದ್ರೆಗೆ ಜಾರಿ ಕೊಂಚ ಎಚ್ಚೆತ್ತು ಮತ್ತೆ ನಿದ್ದೆಯನ್ನು ನಿಯಂತ್ರಿಸಲಾಗದೆ ಕುಳಿತಲೆ ತಲೆ ಬಾಗಿ ನಿದ್ರಿಸಿ ನಗೆಪಾಟಲಿಗೆ ಈಡಾದರು.
ಪ್ರಧಾನಿ ನರೇಂದ್ರ ಮೋದಿ 10 ನಿಮಿಷಗಳ ಕಾಲದ ಸುದೀರ್ಘ ಭಾಷಣದಲ್ಲಿ ದೇಶ-ಭಾಷೆ-ತಂತ್ರಜ್ಞಾನದ ಸದ್ಭಳಕೆ ಕುರಿತು ಭಾಷಣ ನೇರವೇರಿಸಿದರು. ಆದರೆ ಇದಾವುದಕ್ಕೂ ಸಿದ್ದು ತಲೆ ಕೆಡೆಸಿಕೊಳ್ಳದೇ ತಮ್ಮ ಮಾಮೂಲಿ ಶೈಲಿಯಲ್ಲಿ ನಿದ್ದೆಗೆ ಜಾರಿದ್ದು ಮಾತ್ರ ನೆರೆದಿದ್ದವರಿಗೆ ಹಾಗೂ ನೋಡಿದವರಿಗೆ ಮನರಂಜನೆಗೆ ಕಾರಣವಾಯಿತು.