News Kannada
Wednesday, July 06 2022

ಮೈಸೂರು

ಸ್ವಯಂ ಸೇವಾ ವಿದ್ಯಾರ್ಥಿ ಮೇಲೆ ಹಲ್ಲೆ : ಪ್ರತಿಭಟನೆ - 1 min read

Photo Credit :

 ಸ್ವಯಂ ಸೇವಾ ವಿದ್ಯಾರ್ಥಿ ಮೇಲೆ ಹಲ್ಲೆ : ಪ್ರತಿಭಟನೆ

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ 103 ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಸ್ವಯಂ ಸೇವಾ ವಿದ್ಯಾರ್ಥಿಯ ಊಟ ಕಿತ್ತುಕೊಂಡು ಹಲ್ಲೆ ನಡೆಸಿದ ಘಟನೆ ಸೋಮವಾರ ನಡೆದಿದ್ದು, ಇದನ್ನು ಖಂಡಿಸಿ ವಿವಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಎರಡು ದಿನಗಳಿಂದ ಮೈಸೂರು ವಿಶ್ವ ವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ 103 ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದ 2 ನೇ ದಿನವಾದ ಸೋಮವಾರ ಬಂದಂತಹ ದೇಶ ವಿದೇಶದ ಅತಿಥಿಗಳಿಗೆ ವಿಶ್ವ ವಿದ್ಯಾನಿಲಯವು ಫುಡ್ ಕೋರ್ಟ್ ಹೆಸರಿನಲ್ಲಿ ಊಟದ ವ್ಯವಸ್ಥೆ ಮಾಡಿದೆ. ಇದನ್ನು ಹೊರಗುತ್ತಿಗೆ ಆಧಾರದ ಮೇಲೆ ಖಾಸಗಿ ವ್ಯಕ್ತಿಗಳಿಗೆ ನೀಡಿದ್ದು, ಈ ಫುಡ್ ಕೋರ್ಟ್ನಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಲು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ತೊಡಗಿಸಿಕೊಂಡಿದೆ. ಆದರೆ ಈ ಸ್ವಯಂ ಸೇವಕರನ್ನು ಮೇಲ್ವಿಚಾರಣೆ ನಡೆಸಲು ಗುತ್ತಿಗೆದಾರ ರೌಡಿಗಳ ರೀತಿಯ ಬೌನ್ಸರ್ ಗಳನ್ನು ನೇಮಿಸಿದ್ದಾರೆ. ಸ್ವಯಂ ಸೇವಕ ವಿದ್ಯಾರ್ಥಿ ಹಸಿವಿನಿಂದ ಮೊದಲು ಊಟ ಮಾಡಲು ಕುಳಿತ ಈ ಸಂಧರ್ಭದಲ್ಲಿ ಬೌನ್ಸರ್ ಗಳು ವಿದ್ಯಾರ್ಥಿಯ ಊಟ ಕಿತ್ತುಕೊಂಡು ಸಾಮೂಹಿಕ ಹಲ್ಲೆ ನಡೆಸಿದ್ದಾರೆ.

ಸ್ವಯಂ ಸೇವಕನೊಬ್ಬನ ಮೇಲೆ ಸಾಮೂಹಿಕವಾಗಿ ಹಲ್ಲೆ ನಡೆಸಿರುವ ಬೌನ್ಸರ್ ಹಾಗೂ ಅವರನ್ನು ನೇಮಿಸಿರುವ ವಿವಿಯ ನಡತೆಯನ್ನು ಖಂಡಿಸಿ ಸ್ವಯಂ ಸೇವಕ ನಿರತ ವಿದ್ಯಾರ್ಥಿಗಳು ಪುಡ್ ಕೋರ್ಟ್ ಮುಂಭಾಗವೇ ಪ್ರತಿಭಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಮೈಸೂರು ವಿವಿ ಕುಲಪತಿ ಪ್ರೊ. ಕೆಎಸ್ ರಂಗಪ್ಪ ಸ್ವಯಂ ಸೇವಕರನ್ನು ಸಮಾಧಾನ ಪಡಿಸಿದರು. ಆದರೂ ಸಹ ವಿದ್ಯಾರ್ಥಿಗಳು ಬಾರ್, ಪಬ್ ಗಳಲ್ಲಿ ಇರುವಂತೆ ವಿಶ್ವ ವಿದ್ಯಾನಿಲಯ ಗಂಗೋತ್ರಿ ಕ್ಯಾಂಪಸ್ ನೊಳಗೆ ಬೌನ್ಸರ್ ಗಳನ್ನು ಕರೆತಂದಿರುವುದು ಖಂಡಿಸಿ ಅವರನ್ನು ಕೂಡಲೇ ಹೊರ ಹಾಕಬೇಕೆಂದು ಪ್ರತಿಭಟನೆ ಮುಂದುವರೆಸಿದರು.

See also  ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಮೂರು ಆನೆಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು