ಮೈಸೂರು: ಮಹಾರಾಜ ಪಿಯು ಕಾಲೇಜಿನ ಸೈಕಲ್ ಸ್ಟ್ಯಾಂಡ್ ನಲ್ಲಿ ಖತರ್ನಾಕ್ ಸೈಕಲ್ ಕಳ್ಳನನ್ನು ವಿದ್ಯಾರ್ಥಿಗಳೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ಶಾಂತಿನಗರದ ನಾಜೀಮ್ ಎಂಬಾತನೇ ಗೂಸಾ ತಿಂದು ಕಂಬಿ ಎಣಿಸುತ್ತಿರುವ ಐನಾತಿ ಕಳ್ಳನಾಗಿದ್ದು, ಸದ್ಯಕ್ಕೆ ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ಕಳ್ಳನ್ನು ಬಂಧಿಸಿರುವ ಲಕ್ಷ್ಮಿಪುರಂ ಠಾಣೆಯ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ಮೂರ್ನಾಲ್ಕು ದಿನಗಳಿಂದ ಮಹಾರಾಜ ಸಂಜೆ ಕಾಲೇಜಿನ ಹೈಸ್ಕೂಲ್ ಸೈಕಲ್ ಸ್ಟ್ಯಾಂಡ್ ನಲ್ಲಿ ನಿತ್ಯವೂ ಒಂದೊಂದು ಸೈಕಲ್ ಕಳ್ಳತನವಾಗುತ್ತಿದ್ದರೂ ಕಳ್ಳ ಮಾತ್ರ ಸಿಕ್ಕಿರಲಿಲ್ಲ. ಅದರಂತೆ ವಿದ್ಯಾರ್ಥಿಗಳು ಸ್ಟ್ಯಾಂಡ್ ನಲ್ಲಿ ಸೈಕಲ್ ನಿಲ್ಲಿಸಿ ಕೆಲ ವಿದ್ಯಾರ್ಥಿಗಳು ಸೈಕಲ್ ಸ್ಟ್ಯಾಂಡ್ ಸಮೀಪದಲ್ಲಿ ಕಾದು ಕುಳಿತಿದ್ದಾರೆ. ಎಂದಿನಂತೆ ಸೈಕಲ್ ಕಳವು ಮಾಡಲು ಆಗಮಿಸಿದ ನಾಜೀಮ್ ನನ್ನು ಸ್ಥಳದಲ್ಲೇ ಹಿಡಿದ ವಿದ್ಯಾರ್ಥಿಗಳು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.