ಮೈಸೂರು: ತನ್ನ ಗ್ರೀನ್ ಪ್ರಾಜೆಕ್ಟ್ ವರದಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತೋರಿಸಲು ಅವರ ಕಾರಿಗೆ ಅಡ್ಡ ಬಂದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದು, ಇಂದು ಆತನನ್ನು ಬಿಡುಗಡೆ ಮಾಡಲಾಯಿತು.
ಡಿಪ್ಲೊಮೊ ವಿದ್ಯಾರ್ಥಿ ವಿನಯ್ ಎಂಬಾತ ಬಂಧಿತ ವಿದ್ಯಾರ್ಥಿ. ಬಿಡುಗಡೆ ನಂತರ ಮಾಧ್ಯಮದವರ ಜತೆ ಮಾತನಾಡಿ, ಸಮಾಜದ ದೃಷ್ಟಿಯಲ್ಲಿ ನಾನು ಮಾಡಿದ್ದು ತಪ್ಪೇ ಇರಬಹುದು, ಆದ್ರೆ ನನ್ನ ದೃಷ್ಟಿಯಲ್ಲಿ ನಾನು ಮಾಡಿದ್ದು ತಪ್ಪಲ್ಲ. ನಾನು ನನ್ನ ವರದಿಯನ್ನು ಮೋದಿಯವರಿಗೆ ತೋರಿಸಲು ಪ್ರಯತ್ನಿಸಿದೆ. ಆದರೆ ಅದನ್ನು ಪೊಲೀಸರು ತಡೆದರು. ನಾನು ಹೋಗಿದ್ದ ದಾರಿ ತಪ್ಪು ಇರಬಹುದು ಆದರೆ ಉದ್ದೇಶ ಒಳ್ಳೆಯದಲ್ಲವೇ? ನನ್ನ ನಡವಳಿಕೆಯಿಂದ ನನಗೇನು ಬೇಜರಾಗಿಲ್ಲ ಎಂದು ಹೇಳಿಕೊಂಡಿದ್ದಾನೆ.
ಅಲ್ಲದೆ ನನ್ನ ಗ್ರೀನ್ ಪ್ರಾಜೆಕ್ಟ್ ವರದಿ ದೇಶಕ್ಕೆ ಒಳ್ಳೇದಾಗಲಿದ್ದು, ಅದನ್ನು ಜಾರಿಗೊಳಿಸಬೇಕಿದೆ. ನಾನು ಮಾಡಿದ್ದು ದೇಶದ ಒಳಿತಿಗಾಗಿ ಸರಿಯಿದೆ. ಸಮಾಜದ ದೃಷ್ಟಿಯಿಂದ ನಾನು ಮಾಡಿದ್ದು ತಪ್ಪು ಎಂದಾದರೆ ನನ್ನ ಕ್ಷಮಿಸಿ ಎಂದಿದ್ದಾನೆ.