ಮೈಸೂರು: ಲೋಕಾಯುಕ್ತ ನೇಮಕ ವಿಚಾರದಲ್ಲಿ ಈಗಾಗಲೇ ಇಬ್ಬರ ಹೆಸರ ಕೇಳಿಬಂದಿದ್ದು, ಈ ಪೈಕಿ ಒಬ್ಬರ ಹೆಸರನ್ನು ಇನ್ನೆರಡು ದಿನಗಳಲ್ಲಿ ಸೂಚಿಸಿ ಶಿಫಾರಸ್ಸು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಹೆಲಿಪ್ಯಾಡ್ನಲ್ಲಿ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದು ಲೋಕಾಯುಕ್ತ ನೇಮಕ ವಿಚಾರದಲ್ಲಿ ಈಗಾಗಲೇ ಎಸ್.ಆರ್ ನಾಯಕ್ ಹಾಗೂ ವಿಕ್ರಮ್ ಜೀತ್ಸೇನ್ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಆದರೆ ಪತ್ರಿಕೆಗಳಲ್ಲಿ ಎಸ್.ಆರ್. ನಾಯಕ್ ವಿರುದ್ಧ ಆರೋಪದ ದೂರುಗಳು ಕೇಳಿಬಂದಿರುವುದು ಸರಿಯಲ್ಲ. ಇವರ ವಿರುದ್ಧ ಯಾವುದೇ ದೂರುಗಳಿಲ್ಲವೆಂದರು. ಸದ್ಯಕ್ಕೆ ಇಬ್ಬರ ಹೆಸರು ಚರ್ಚೆಯಲ್ಲಿದ್ದು ಇನ್ನೆರಡು ದಿನಗಳಲ್ಲಿ ಲೋಕಾಯುಕ್ತರ ಹೆಸರನ್ನು ಅಂತಿಮಗೊಳಿಸಿ ಕಳುಹಿಸಿಕೊಡಲಾಗುವುದು ಎಂದರು.