News Kannada
Friday, July 01 2022

ಮೈಸೂರು

ಹುಣಸೂರಿನಲ್ಲಿ ಕಾಡಾನೆ ಹಾವಳಿಗೆ ರೈತರು ತತ್ತರ - 1 min read

Photo Credit :

ಹುಣಸೂರಿನಲ್ಲಿ ಕಾಡಾನೆ ಹಾವಳಿಗೆ ರೈತರು ತತ್ತರ

ಮೈಸೂರು: ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಾಂಚಿನ ಪ್ರದೇಶ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿಯಿಂದ ರೈತರು ತತ್ತರಿಸಿದ್ದಾರೆ.


ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ನೇಗತ್ತೂರು ಗ್ರಾಮಕ್ಕೆ ರಾತ್ರಿ ನುಗ್ಗಿದ  ಐದಕ್ಕೂ ಹೆಚ್ಚು ಕಾಡಾನೆಗಳು ಗ್ರಾಮದ ಬೋಮಯ್ಯ ಎಂಬುವರು ಮನೆ ಪಕ್ಕದ ಕಣದಲ್ಲಿ ಒಕ್ಕಣೆ ಮಾಡಿ ರಾಶಿ ಹಾಕಿದ್ದ ಭತ್ತದ ರಾಶಿ, ಒಕ್ಕಣೆಗೆ ಸಿದ್ದವಾಗಿದ್ದ ರಾಗಿ, ಹುರುಳಿ ಮೆದೆ ಹಾಗೂ ಗ್ರಾಮದ ವೀರಭದ್ರಯ್ಯ ಮತ್ತು ಸುರೇಶ್ ರವರಿಗೆ ಸೇರಿದ್ದ ರಾಗಿ ಬೆಳೆಯನ್ನು ತಿಂದು ತುಳಿದು ದಾಂಧಲೆ ನಡೆಸಿ ಲಕ್ಷಾಂತರ ರೂ. ಬೆಲೆಬಾಳುವ ಫಸಲನ್ನು ನಾಶಪಡಿಸಿವೆ. ಬಳಿಕ ಅಲ್ಲಿಂದ ತೆರಳಿ  ಸಮೀಪದ ಶೆಟ್ಟಹಳ್ಳಿ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಬೀಡು ಬಿಟ್ಟಿವೆ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಕಾಡಾನೆಗಳು ಯಾವಾಗ ಗ್ರಾಮದತ್ತ ನುಗ್ಗಿ ದಾಂಧಲೆ ಮಾಡಿ ಬಿಡುತ್ತಾವೋ ಎಂಬ ಭಯ ಗ್ರಾಮಸ್ಥರನ್ನು ಕಾಡುತ್ತಿದೆ.

See also  ಮೈಸೂರಿಗೂ ಪೇಜಾವರಶ್ರೀಗೂ ಇದ್ದದ್ದು ಅಂತಿಂಥ ನಂಟಲ್ಲ..!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು