ಮೈಸೂರು: ಜಿಲ್ಲೆಯಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಟೆಕ್ ಹೆಲಿಕಾಫ್ಟರ್ ಪ್ರವಾಸ ಕೈಗೊಂಡಿದ್ದು, ಹೆಲಿಕಾಫ್ಟರಲ್ಲೇ ಜಿಲ್ಲೆಯೊಳಗೆ ಸಂಚರಿಸಿ ಇಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.
ನಂಜನಗೂಡಿನ ಗೊದ್ದನಪುರಕ್ಕೆ ರಸ್ತೆಯಲ್ಲೇ ತೆರಳಿ ಕಪಿಲಾ ನದಿ ಸೇತುವೆಯ 15 ಕೋಟಿ ರೂ ಕಾಮಗಾರಿಗೆ ಚಾಲನೆ ನೀಡಿ, ಬೆಳ್ಳಗ್ಗೆ 10 ಕ್ಕೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಾಸ್ಥಾನದ ಬಳಿಯ ಕನಕ ಜಯಂತಿ ಮೆರವಣಿಗೆಗೆ ಆಗಮಿಸಿ ಉದ್ಘಾಟನೆ ನಡೆಸಿದ ಸಿಎಂ ಬಳಿಕ ಲಲಿತ್ಮಹಲ್ ಹೆಲಿಕಾಫ್ಟರ್ ಮೂಲಕ 11.35 ಕ್ಕೆ ದೊಡ್ಡಮಾರಗೌಡನಹಳ್ಳಿ ಹೆಲಿಪ್ಯಾಡ್ಗೆ ಸಂಚರಿಸಿ ಅಲ್ಲಿ ಚಾಮುಂಡೇಶ್ವರಿ ವಿಧಾನದ ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ಜನವರಿಯ ಎರಡನೇ ವಾರದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಅಧಿಸೂಚನೆ ಹೊರ ಬಿಳುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಯಾಗಿ 30 ತಿಂಗಳು ಪೂರೈಸಿದ್ದು, ವರುಣಾ ಹಾಗೂ ಚಾಮುಂಡೇಶ್ವರಿ, ನಂಜನಗೂಡು ಕ್ಷೇತ್ರಗಳಿಗೆ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದ ಸಿಎಂ ಸಿದ್ದರಾಮಯ್ಯ. ಸ್ಥಳೀಯ ಸಂಸ್ಥೆಯ ಚುನಾವಣೆಗೆ ಮೊದಲು ಒಂದೇ ದಿನದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಲು ಹೆಲಿಕಾಫ್ಟರ್ ರನ್ನು ಬಳಸಿ ಚಾಲನೆ ನೀಡುತ್ತಿರುವುದು ನೀತಿ ಸಂಹಿತೆ ಜಾರಿಯಾಗುವ ಭಯದಿಂದ ಎನ್ನಲಾಗಿದೆ.