ಮೈಸೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಮೈಸೂರಿನ ಮೃಗಾಲಯದ ಹುಲಿಯೊಂದು ಸಾವನ್ನಪ್ಪಿದ್ದು, ಮೃಗಾಲಯದಲ್ಲಿ ಒಂದು ರೀತಿಯ ಸೂತಕದ ವಾತಾವರಣ ಆವರಿಸಿದೆ.
ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಹುಲಿಕಾಲಿಗೆ ಕಬ್ಬಿಣದ ಪ್ಲೇಟ್ ಅಳವಡಿಸಿ ಶಸ್ತ್ರಚಿಕಿತ್ಸೆ ಮಾಡಿ ಮೈಲಿಗಲ್ಲೊಂದನ್ನು ಸಾಧಿಸಿದ್ದ ಮೈಸೂರು ಮೃಗಾಲಯದಲ್ಲಿದ್ದ 4 ವರ್ಷದ ಸಂಜಯ್ ಹುಲಿ ಸರಿಯಾದ ನಿರ್ವಹಣೆ ಇಲ್ಲದೆ, ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದೆ.
2015 ರ ಮಾರ್ಚ್ನಲ್ಲಿ 4 ವರ್ಷದ ಸಂಜಯ್ ಹೆಸರಿನ ರಾಯಲ್ ಬೆಂಗಾಲ್ ಹುಲಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಮೃಗಾಲಯದ ವಶಕ್ಕೆ ನೀಡಿತ್ತು. ಈ ವೇಳೆ ಹುಲಿ ಬಲಭುಜ, ತಲೆ ಮುಂಗಾಲಿನಲ್ಲಿ ಗುಂಡೇಟಿನ ಗಾಯಗಳಾಗಿ ಹುಲಿಯ ಮುಂಗಾಲಿನ ಮೂಳೆ ಮುರಿತಕ್ಕೆ ಒಳಗಾಗಿತ್ತು. ಹುಲಿಯ ಕಾಲಿನ ಮೂಳೆ ಮುರಿತಕ್ಕೆ ಒಳಗಾದ ಹಿನ್ನಲೆಯಲ್ಲಿ ದೇಶದಲ್ಲಿ ಪ್ರಪ್ರಥಮವಾಗಿ ಹುಲಿ ಮುಂಗಾಲಿನ ಶಸ್ತಚಿಕಿತ್ಸೆ ನೀಡಿದ ತಜ್ಞರು ಕಬ್ಬಿಣದ ಪ್ಲೇಟ್ ಅಳವಡಿಸಿದ್ದರು. 6 ತಿಂಗಳವರೆಗೂ ಮೃಗಾಲಯ ಆಸ್ಪತ್ರೆಯ ಸುಶ್ರೂಷೆಯಲ್ಲಿದ್ದ ಹುಲಿ ಸ್ವಲ್ಪ ಚೇತರಿಕೆ ಸಹ ಕಂಡು ಬಂದಿತ್ತು. ಈ ವೇಳೆ ಕಾಂಟ್ರಾಲ್ಯಾಟರ್ ಕಾಲಿನ ಸಮಸ್ಯೆಯಿಂದ ಎಡ ಮಂಡಿಯಲ್ಲಿ ಬಾವು ಕಾಣಿಸಿಕೊಂಡು ಡಿಸೆಂಬರ್ 28 ರಲ್ಲಿ ಬಾವು ತೆಗೆಯಲಿ ದೆಹಲಿ ನುರಿತ ಪ್ರಾಣಿ ತಜ್ಞರು ಪ್ರಯತ್ನಿಸಿದ್ದರು. ಆದರೆ ರಕ್ತದಲ್ಲಿ ಸೋಂಕು ಕಂಡು ಬಂದಿದ್ದರಿಂದ ಹೆಚ್ಚಿನ ಚಿಕಿತ್ಸೆ ನೀಡಲಾಗಿತ್ತು.