ಮೈಸೂರು: ಮೊಬೈಲ್ ಕರೆ ಬಂತೆಂದು ರಾತ್ರಿ ಮನೆಯಿಂದ ಹೋದವ ಬರ್ಬರವಾಗಿ ಹೆಣವಾಗಿ ಸಿಕ್ಕಿರುವ ಘಟನೆ ಮೈಸೂರಿನ ಇಲವಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಮಾಬಾಯಿ ನಗರದ ಶಿವಲಿಂಗು ಕೊಲೆಯಾದ ವ್ಯಕ್ತಿ. ರಾತ್ರಿ 7.30 ರಲ್ಲಿ ಶಿವಲಿಂಗುವಿನ ಮೊಬೈಲ್ ಗೆ ಕರೆ ಬಂದಿದ್ದು, ಬಳಿಕ ಆತ ಬೈಕ್ ನಲ್ಲಿ ಮನೆ ಬಿಟ್ಟಿದ್ದಾನೆ. ಆದರೆ ರಾತ್ರಿ 10.30 ರಲ್ಲಿ ತಂದೆ ಶಂಕರ್ ಕರೆ ಮಾಡಿದಾಗ ಅಪ್ಪ ನಾನು ಸ್ವಲ್ಪ ಬ್ಯುಸಿ ಇದ್ದೇನೆ ತಡವಾಗಿ ಮನೆಗೆ ಬರುತ್ತೇನೆ. ಆಮೇಲೆ ನಾನೇ ಕರೆ ಮಾಡಿ ತಿಳಿಸುತ್ತೇನೆ ಎಂದವನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಎಲ್ಲೊ ಯಾವುದೊ ಕೆಲಸದಲ್ಲಿ ಬ್ಯುಸಿ ಇರಬೇಕೆಂದು ಎಂದಿನಂತೆ ತಂದೆ ಸುಮ್ಮನ್ನಾಗಿದ್ದಾರೆ. ಆದರೆ ಬೆಳ್ಳಗ್ಗೆ 7.30 ರ ಸಮಯಕ್ಕೆ ಇಲವಾಲ ಠಾಣೆಯ ಪೊಲೀಸರು ಕರೆ ಮಾಡಿ ನಿಮ್ಮ ಮಗನ ಕೊಲೆಯಾಗಿದ್ದು, ಇಲವಾಲ ಸಮೀಪದ ಅಲೋಕ ರಸ್ತೆಯಲ್ಲಿ ಶವ ಸಿಕ್ಕಿದ್ದು, ತಡರಾತ್ರಿ ಘಟನೆಯಾಗಿದೆ ಎಂದು ತಿಳಿಸುತ್ತಿದ್ದಂತೆ ತಂದೆ ದಿಗ್ಭ್ರಂತಿಗೆ ಒಳಗಾಗಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಶವವನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಮೃತ ದೇಹ ನೀಡಿದ್ದಾರೆ.
ಪ್ರಕರಣ ಮೈಸೂರಿನ ಇಲವಾಲ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.