News Kannada
Thursday, July 07 2022

ಮೈಸೂರು

ವೇಶ್ಯಾವಾಟಿಕೆ ಅಡ್ಡೆ ಮಾಹಿತಿ ನೀಡಿದ ವ್ಯಕ್ತಿಗೆ ಎಸ್ ಐನಿಂದ ಹಿಗ್ಗಾಮುಗ್ಗಾ ಥಳಿತ - 1 min read

Photo Credit :

 ವೇಶ್ಯಾವಾಟಿಕೆ ಅಡ್ಡೆ ಮಾಹಿತಿ ನೀಡಿದ ವ್ಯಕ್ತಿಗೆ ಎಸ್ ಐನಿಂದ ಹಿಗ್ಗಾಮುಗ್ಗಾ ಥಳಿತ

ಮೈಸೂರು: ಹೈಟೆಕ್ ವೇಶ್ಯಾವಾಟಿಕೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನೊಬ್ಬನನ್ನು ಎಸ್ ಐಯೊಬ್ಬರು ಥಳಿಸಿ ಕಾಲು ಮುರಿದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

SI thrashes social activist for tipping off senior cops about flesh trade-1ಸಾಮಾಜಿಕ ಕಾರ್ಯಕರ್ತ ಸಿದ್ಧು ಅಲಿಯಾಸ್ ಸಿದ್ಧಲಿಂಗೇಗೌಡ ಹಲ್ಲೆಗೊಳಗಾದವ. ಈತ ಮೈಸೂರಿನಲ್ಲಿ ಸ್ಥಳೀಯ ಪೊಲೀಸರ ಸಹಕಾರದಿಂದಲೇ ನಡೆಯುವ ಹೈಟೆಕ್ ವೇಶ್ಯಾವಾಟಿಕೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಹಾಗೂ ಎನ್‍ಜಿಓಗಳಿಗೆ ಮಾಹಿತಿ ನೀಡಿ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿ ಸ್ಥಳೀಯ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದನು.

ಡಿಸೆಂಬರ್ 31 ರಾತ್ರಿ ಸುಮಾರು 11 ಗಂಟೆ ಸಮಯದಲ್ಲಿ ಮನೆಗೆ ಹೋಗಲು ಹಿನಕಲ್ ಸಿಗ್ನಲ್ ಬಳಿ ನಿಂತಿದ್ದ ಸಿದ್ಧುವನ್ನು ವಿಜಯನಗರ ಠಾಣೆಯ ಎಸ್‍ಐ ಪುನೀತ್ ನಾನು ನಿನ್ನನ್ನೇ ಹುಡುಕುತ್ತಿದ್ದೇನೆ. ಪೊಲೀಸ್ ಠಾಣೆಗೆ ಬಾ ಎಂದು ಕರೆದೊಯ್ದು ಠಾಣೆಯಲ್ಲಿ ರಾತ್ರಿಯಿಡೀ ಹಿಗ್ಗಾಮುಗ್ಗಾ ಥಳಿಸಿ ಮಧ್ಯಾಹ್ನ 3 ಗಂಟೆಗೆ ಖಾಲಿ ಪತ್ರಕ್ಕೆ ಸಹಿ ಹಾಕಿಸಿ ಕಳುಹಿಸಿದ್ದಾರೆ.

ಠಾಣೆಯಲ್ಲಿ ರಾತ್ರಿಯಿಡೀ ಹಿಗ್ಗಾಮುಗ್ಗಾ ಥಳಿಸಿ ಮಧ್ಯಾಹ್ನ 3 ಗಂಟೆಗೆ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಇನ್ನು ಮುಂದೆ ಮೇಲಾಧಿಕಾರಿಗಳಿಗೆ ನಮ್ಮ ವ್ಯಾಪ್ತಿಯಲ್ಲಿ ನಡೆಯುವ ವೇಶ್ಯಾವಾಟಿಕೆಗಳ ಬಗ್ಗೆ ಮಾಹಿತಿ ತಿಳಿಸಿ ನಮ್ಮ ಮಾಮೂಲಿಗೆ ಅಡ್ಡಿ ಆದರೆ, ಸುಳ್ಳು ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಸಿ ಕಳುಹಿಸಿದ್ದಾರೆ.  

ಯಾವುದೇ ಅಪರಾಧ ಮಾಡದೇ ಅಪರಾಧ ನಡೆಯುವ ಬಗ್ಗೆ ಮಾಹಿತಿ ನೀಡಿದಕ್ಕೆಈ ರೀತಿ ಹಲ್ಲೆ ನಡೆಸಿದ ವಿಜಯನಗರ ಎಸ್‍ಐ ಪುನೀತ್ ಹಾಗೂ ಮುಖ್ಯಪೇದೆ ವಿರುದ್ಧ ಸಿದ್ದಲಿಂಗೇಗೌಡ ಮಾನವ ಹಕ್ಕು ಆಯೋಗ, ಡಿಜಿಪಿ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

See also  ನೂತನ ಮೇಯರ್ ಆಗಿ ಎಂ ಜೆ ರವಿಕುಮಾರ್ ಆಯ್ಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು