ಮೈಸೂರು: ಅಂತರ್ ಧರ್ಮೀಯ ವಿವಾಹ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಹರಣಕ್ಕೆ ಒಳಗಾಗಿದ್ದ ಯುವತಿ ಹಮೀನಾಳನ್ನು ಮೈಸೂರು ಪೊಲೀಸರು ಇಂದು ಹೈಕೋರ್ಟ್ಗೆ ಹಾಜರು ಪಡಿಸಿದ್ದಾರೆ.
ಮಂಗಳೂರಿನ ಹಲೀಮಾ ಶಾಹಿಲ್ ಶಿವರಾಜ್ ಎಂಬ ಯುವಕನ್ನು ಪ್ರೀತಿಸಿ ವಿವಾಹವಾಗಿದ್ದಳು. ಆದರೆ ಇವರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ತಂದೆ ಖ್ಯಾತ ಉದ್ಯಮಿ ಡಿ.ಕೆ.ಎಸ್ ಹಮೀದ್ ಮಗಳ ಅಪಹರಣಕ್ಕೆ ಸುಪಾರಿ ನೀಡಿದ್ದರು. ಈ ಹಿನ್ನಲೆಯಲ್ಲಿ ಮೈಸೂರಿನಲ್ಲಿ ನೆಲೆಸಿದ್ದ ವಿವಾಹಿತ ಜೋಡಿಯನ್ನು ಕಳೆದ ಡಿಸೆಂಬರ್ 4 ರಂದು ಮೈಸೂರಿನ ಕೃಷ್ಣಮೂರ್ತಿ ಪುರಂನಲ್ಲಿ ಪತಿ ಶಿವರಾಜ್ ಮೇಲೆ ಹಲ್ಲೆ ನಡೆಸಿ, ಯುವತಿ ಹಲೀಮಾ ಶಾಹಿನ್ನನ್ನು ಅಪಹರಿಸಲಾಗಿತ್ತು. ಈ ಬಗ್ಗೆ ಪತಿ ಶಿವರಾಜ್ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಹೈಕೋರ್ಟ್ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ಜ.11 ರೊಳಗೆ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿತ್ತು. ಇದರನ್ವಯ ಮೂರು ತಂಡಗಳನ್ನು ರಚಿಸಿದ ಮೈಸೂರು ಪೊಲೀಸರು ಇಂದು ಯುವತಿಯ ಹಲೀಮಾ ಶಾಹಿಲ್ಗೆ ಪ್ರಾಣ ಭಯ ಇರುವುದರಿಂದ ಗುಪ್ತವಾಗಿ ಆಕೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಅಪಹರಣಗೊಂಡಿದ್ದ ಹಲೀಮಾ ಶಾಹಿನ್ ನ್ಯಾಯಾಧೀಶರ ಮುಂದೆ ನಾನು ಪತಿ ಶಿವರಾಜ್ ಜತೆ ಬಾಳಲು ಇಚ್ಛೆ ಪಡುತ್ತೇನೆ ಎಂಬ ಹೇಳಿಕೆ ಹಿನ್ನಲೆಯಲ್ಲಿ ಯುವತಿಯನ್ನು ಶಿವರಾಜ್ ಅವರ ಜತೆ ಕಳುಹಿಸುವಂತೆ ಹೇಳಿಕೊಂಡಿದ್ದು, ನ್ಯಾಯಾಲಯ ಯುವತಿಯನ್ನು ಪತಿ ಶಿವರಾಜ್ ಜತೆ ಕಳುಹಿಸುವಂತೆ ನ್ಯಾಯಾದೀಶರು ಆದೇಶಿಸಿದ್ದಾರೆ. ಈ ಆದೇಶದನ್ವಯ ಅಪಹರಣಗೊಂಡಿದ್ದ ಪತ್ನಿ ಹಲೀಮಾ ಶಾಹಿನ್ನನ್ನು ಶಿವರಾಜ್ ವಶಕ್ಕೆ ಬಿಟ್ಟಿರುವ ಪೊಲೀಸರು ಇಬ್ಬರನ್ನು ಒಂದುಗೂಡಿಸಿದ್ದಾರೆ.