News Kannada
Tuesday, July 05 2022

ಮೈಸೂರು

ಮತ್ತೆ ಒಂದಾದ ಅನ್ಯಧರ್ಮೀಯ ಜೋಡಿ - 1 min read

Photo Credit :

ಮತ್ತೆ ಒಂದಾದ ಅನ್ಯಧರ್ಮೀಯ ಜೋಡಿ

ಮೈಸೂರು: ಪಾಲಕರ ವಿರೋಧದ ನಡುವೆಯು ವಿವಾಹವಾದ ಅನ್ಯಧರ್ಮೀಯ ಜೋಡಿ, ನಂತರ ಪಾಲಕರ ಮಧಯಪ್ರವೇಶದಿಂದ ದೂರವಾಗಿದ್ದ ಪ್ರೇಮಿಗಳನ್ನು ಹೈಕೋರ್ಟ್ ಒಂದು ಮಾಡಿದೆ.


ಎಲ್ಲರ ವಿರೋಧದ ನಡುವೆಯೂ ಪ್ರೀತಿಯನ್ನು ಗೆದ್ದು ವಿವಾಹವಾಗಿ ಮೈಸೂರಿನಲ್ಲಿ ವಾಸವಿದ್ದ ಜೋಡಿ ಶಿವರಾಜ್ ಹಾಗೂ ಹಲೀಮಾ ಶಾಹಿಲ್. ಆದರೆ ಇವರ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ತಂದೆ ಅಂದೊಂದು ದಿನ ಮಗಳ ಅಪಹರಣಕ್ಕೆ ಸುಪಾರಿ ನೀಡಿದ್ದರು. ಆದರೆ ಡಿಸೆಂಬರ್ 4 ರಂದು ಸುಪಾರಿ ಅಪಹರಣಕಾರರು ಹಗಲಲ್ಲೇ ಮೈಸೂರಿನ ಕೃಷ್ಣ ಮೂರ್ತಿ ಪುರಂನ ವೃತ್ತದಲ್ಲಿ ಪತಿ ಶಿವರಾಜ್ ಮೇಲೆ ಹಲ್ಲೆ ನಡೆಸಿ ಪತ್ನಿ ಹಲೀಮಾ ಶಾಹಿಲ್‍ನನ್ನು ಅಪಹರಿಸಿದ್ದರು. ಅಂದಿನಿಂದ ಬೇರಾಗಿದ್ದ ನವಜೋಡಿಗಳ ಪೈಕಿ ಪತಿ ಶಿವರಾಜ್ ಪತ್ನಿಯನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಕೊನೆಗೆ ನ್ಯಾಯಾಲಯದ ಮೊರೆ ಹೋಗಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಜ.11 ರೊಳಗೆ ಹಲೀಮಾ ಶಾಹಿಲ್‍ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಹೈಕೋರ್ಟ್ ಮೈಸೂರು ಪೊಲೀಸರಿಗೆ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಎಚ್ಚೆತ್ತ ಮೈಸೂರು ಪೊಲೀಸರು ಮೂರು ತಂಡಗಳಾಗಿ ಯುವತಿಯ ಹುಡುಕಾಟ ನಡೆಸಿದ್ದರು. ಇಂದು ಹೈಕೋರ್ಟ್ ನ್ಯಾಯಾಧೀಶರ ಮುಂದೆ ಯುವತಿಯನ್ನು ತಂದು ನಿಲ್ಲಿಸುವ ಮೂಲಕ ಅಂತಧರ್ಮೀಯ ಕಿಡ್ನಾಪ್ ಪ್ರಕರಣ ಸುಖಾಂತ್ಯ ಕಂಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಯುವ ಜೋಡಿಗಳಿಗೆ ಮೈಸೂರು ಪೊಲೀಸರು ಭದ್ರತೆ ಒದಗಿಸುವ ಭರವಸೆ ನೀಡಿದ್ದಾರೆ. ಕೊನೆಗೂ ಸಂಕಷ್ಟಗಳ ಮುಗಿಸಿದ ನವಜೋಡಿ ಒಂದಾಗಿವೆ.

ನನಗೆ ಅಪ್ಪನ್ನೂ ಬೇಕು, ಪ್ರೀತಿಸಿದ ಪತಿಯು ಬೇಕು ಹಾಗಾಗಿ ಪತಿಯ ಜೊತೆಗೆ ನನಗೆ ಬಾಳುವ ಆಸೆ. ನನ್ನನ್ನು ಅವನೊಟ್ಟಿಗೆ ಬಾಳಲು ಅವಕಾಶ ಕಲ್ಪಿಸಿಕೊಡಿ ಎಂದು ನ್ಯಾಯಾದೀಶರ ಬಳಿ ಕೇಳಿಕೊಂಡೆ. ಅದರಂತೆ ಅನುಮತಿ ನೀಡಿದರು. ಇಂದು ಅವನನ್ನು ಮತ್ತೆ ಸೇರುತ್ತಿರುವುದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಇಬ್ಬರು ಒಟ್ಟಿಗೆ ಬಾಳುತ್ತೇನೆ ಎಂದು ಹಲೀಮಾ ಶಾಹಿಲ್‍ ಸಂತಸ ವ್ಯಕ್ತಪಡಿಸಿದರು.

ಪತಿ ಶಿವರಾಜ್ ಮಾತನಾಡಿ ಅವಳು ಕಿಡ್ನಾಪ್ ಆದ ಎರಡೂವರೆ ತಿಂಗಳಿಂದಲೂ ಅವಳ ನೆನಪಿನಲ್ಲೇ ನೋವು ಅನುಭಿವಿಸಿದ್ದೇನೆ. ಇಂದು ಅವಳನ್ನು ಕಂಡು ಮಾತನಾಡಿದಾಗ ನಾನೇ ಅವಳಿಗೆ ಕೇಳಿದೆ ನನ್ನ ಜತೆಗೆ ಬರುತ್ತಿಯೋ ಇಲ್ಲ ಅವರೊಟ್ಟಿಗೆ ಹೋಗುತ್ತೀಯೋ ಎಂದು ಆಗ ಅವಳು ನಿನ್ನೊಟ್ಟಿಗೆ ಬರುತ್ತೇನೆ ಎಂಬುದನ್ನು ಕೇಳುತ್ತಿದ್ದಂತೆ ಇನ್ನಿಲ್ಲದ ಸಂತಸ ಆಗಿದೆ. ಸದ್ಯಕ್ಕೆ ಇದ್ದ ನೋವು ಕಳೆದಿದೆ ಮುಂದಿನ ದಿನಗಳಲ್ಲಿ ಇಬ್ಬರು ಒಟ್ಟಾಗಿ ಬಾಳುತ್ತೇವೆ ಎಂದರು.

See also  ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಅಧಿಕಾರಿಗಳ ಸಭೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು