ಮೈಸೂರು: ಹಿಂಬದಿಯ ಸವಾರರಿಗೂ ಹೆಲ್ಮೇಟ್ ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಮೈಸೂರಿನ ಅರಿವು ಸಂಸ್ಥೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವ ಮೂಲಕ ಅಂಚೆ ಚಳುವಳಿ ನಡೆಸಿದರು.
ಮೈಸೂರು ನಗರಪಾಲಿಕೆ ಕಚೇರಿ ಎದುರು ಸರ್ಕಾರ ಹಿಂಬದಿಯ ಸವಾರರಿಗೂ ಹೆಲ್ಮೇಟ್ ಕಡ್ಡಾಯಗೊಳಿಸಿರುವುದನ್ನು ಖಂಡಿಸಿದ ಅರಿವು ಸಂಸ್ಥೆಯ ಪ್ರತಿಭಟನಾಕರಾರು ಅಲ್ಲೇ ಇದ್ದ ಅಂಚೆ ಪೆಟ್ಟಿಗೆಗೆ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದ್ವಿಚಕ್ರ ವಾಹನದ ಹಿಂಬದಿ ಸವಾರರಿಗೆ ಹೆಲ್ಮೇಟ್ ಕಡ್ಡಾಯಗೊಳಿಸಿರುವುದು ಖಂಡನೀಯವೆಂದು ಆಕ್ರೋಶ ಪಡಿಸಿದರು. ಕೂಡಲೇ ರಾಜ್ಯ ಸರ್ಕಾರ ಹಿಂಬದಿಯ ಸವಾರರಿಗೆ ಹೆಲ್ಮೇಟ್ ಕಡ್ಡಾಯ ನೀತಿಯನ್ನು ಹಿಂಪಡೆಯುವಂತೆ ಪತ್ರದ ಮೂಲಕ ಒತ್ತಾಯಿಸಿ ಪ್ರತಿಭಟಿಸಿದರು.