ಮೈಸೂರು: ಸ್ನೇಹಿತನೊಬ್ಬನ ಮೊಬೈಲ್ ಕರೆ ಹಿಂದೆ ಹೋಗಿ ಕೊಲೆಯಾದ ಪ್ರಕರಣವನ್ನು ಭೇಧಿಸಿರುವ ಇಲವಾಲ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಸವಣ್ಣ ಶಿವಲಿಂಗನನ್ನು ಕೊಲೆಗೈದ ವ್ಯಕ್ತಿ. ಮೈಸೂರಿನ ಮಹದೇವುಪರ ಸಮೀಪದ ರಮಾಬಾಯಿ ನಗರದ ನಿವಾಸಿ ಕಾರ್ ಡ್ರೈವರ್ ಶಿವಲಿಂಗು(19) ಜನವರಿ 12 ರ ರಾತ್ರಿ ಸ್ನೇಹಿತನೊಬ್ಬನ ಕರೆ ಬಂತೂ ಎಂದು ಮನೆಯಿಂದ ಹೊರಗೆ ಹೊರಟವ ಬೆಳ್ಳಗ್ಗೆ ಇಲವಾಲ ಸಮೀಪದ ಆಲೋಕ ರಸ್ತೆಯಲ್ಲಿ ಹತ್ಯೆಯಾದ ಸ್ಥಿತಿಯಲ್ಲಿ ಶವವಾಗಿ ದೊರೆತಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಇಲವಾಲ ಠಾಣೆಯ ಪೊಲೀಸರು ಮೊಬೈಲ್ ಕರೆ ಆಧರಿಸಿ ಹಂತಕರನ್ನು ಸೆರೆ ಹಿಡಿಯಲು ಸಂಚು ರೂಪಿಸಿದ್ದರು.
ರಮಾಬಾಯಿನಗರ ನಿವಾಸಿ ಬಸವಣ್ಣ ಎಂಬುವವರ ಪುತ್ರಿಯನ್ನು ಶಿವಲಿಂಗು ಕೆಲವು ದಿನಗಳಿಂದ ಚುಡಾಯಿಸುತ್ತಿದ್ದನು. ಪುತ್ರಿಯನ್ನು ಚುಡಾಯಿಸದಂತೆ ಬಸವಣ್ಣ ಹಲವು ಬಾರಿ ಬುದ್ಧಿ ಹೇಳಿದ್ದರು. ಆದರೂ ಶಿವಲಿಂಗು ಯುವತಿಯನ್ನು ಚುಡಾಯಿಸುವುದನ್ನು ಬಿಟಿರಲಿಲ್ಲ. ಈ ಹಿನ್ನಲೆಯಲ್ಲಿ ಬಸವಣ್ಣ ಶಿವಲಿಂಗು ನಡುವೆ ಗಲಾಟೆ ಸಹ ನಡೆದಿತ್ತು.
ಶಿವಲಿಂಗನ ಕೊಲೆಗೆ ಸಂಚು ರೂಪಿಸಿದ ಬಸವಣ್ಣ, ಶಿವಲಿಂಗನ ಸ್ನೇಹಿತರಾದ ಮನೋಜ್ ಹಾಗೂ ನವೀನ್ ನೆರವು ಪಡೆದುಕೊಂಡು ಶಿವಲಿಂಗನ ಕೊಲೆ ಸ್ಕೆಚ್ ಹಾಕಿದರು. ಕೊನೆಗೆ ಮನೋಜ್ ಜ.12 ರಂದು ಶಿವಲಿಂಗುಗೆ ಕರೆ ಮಾಡಿ ಕರೆಸಿಕೊಂಡು ಬಾರ್ ವೊಂದರಲ್ಲಿ ಕಂಠಪೂರ್ತಿ ಕುಡಿಸಿದ್ದಾರೆ. ಬಳಿಕ 11 ರ ಸಮಯದಲ್ಲಿ ಇಲವಾಲದ ಆಲೋಕ ರಸ್ತೆಗೆ ಶಿವಲಿಂಗುನನ್ನು ಕರೆ ತರುವಂತೆ ಬಸವಣ್ಣ ಮನೋಜ್ ಗೆ ತಿಳಿಸಿದ್ದಾನೆ. ಅದರಂತೆ ಮನೋಜ್ ಶಿವಲಿಂಗುನನ್ನು ಕರೆತಂದಿದ್ದು ಪುತ್ರಿಯನ್ನು ಚುಡಾಯಿಸದಂತೆ ಎಚ್ಚರಿಸಿದ್ದಾರೆ. ಆದರೆ ಶಿವಲಿಂಗು ಇದಕ್ಕೆ ಒಪ್ಪದಿದ್ದಾಗ ಕುಡಿದ ಅಮಲಿನಲ್ಲಿ ಸಿಮೆಂಟ್ ರಾಡಿನಲ್ಲಿ ತಲೆಗೆ ಹೊಡೆದು ಹತ್ಯೆ ಮಾಡಿದುದ್ದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ. ಬಸವಣ್ಣ, ಮನೋಜ್ ಹಾಗೂ ನವೀನ್ನ್ನು ಬಂಧಿಸಿರುವ ಇಲವಾಲ ಠಾಣೆಯ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.