ಮೈಸೂರು:ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಂಸದೆ ಶೋಭಾ ಕರಂದ್ಲಾಜೆರವರ ಮದುವೆ ಸಿಡಿಯ ಅಗತ್ಯ ದಾಖಲೆಗಳನ್ನು ಒಂದು ವಾರಗಳಲ್ಲಿ ಬಿಡುಗಡೆ ಮಾಡುವುದಾಗಿ ಮತ್ತೊಮ್ಮೆ ಕೆಜಿಪಿ ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ನಡುವೆ ಮದುವೆ ಆಗಿರುವುದು ನಿಜ. ಒಮ್ಮೆ ಮೈಸೂರಿನ ದೇವಸ್ಥಾನದಲ್ಲಿ ಮದುವೆ ತಯಾರಿ ನಡೆಸಿದರು. ಇಲ್ಲಿ ಮಾಂಗಲ್ಯಧಾರಣೆ ಸರಿಯಾಗಿ ಆಗಲಿಲ್ಲವೆಂಬ ಕಾರಣಕ್ಕೆ ಮತ್ತೊಮ್ಮೆ ತಿರುಪತಿಯಲ್ಲಿ ಮರು ಮಾಂಗಲ್ಯಧಾರಣೆ ಮಾಡಿಸಿಕೊಂಡಿದ್ದಾರೆ. ನನ್ನ ಬಳಿ ತಿರುಪತಿಯಲ್ಲಿ ವಿವಾಹದ ಸಿಡಿ ಅಗತ್ಯ ದಾಖಲೆಗಳು ಇವೆ. ಅವುಗಳನ್ನು ಇನ್ನೂ ಒಂದು ವಾರಗಳು ಕಾಯಿರಿ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸುವುದಾಗಿ ಹೇಳಿದರು. ಯಡಿಯೂರಪ್ಪನವರು ತಮ್ಮ ವಿವಾಹದ ಬಗ್ಗೆ ಎಲ್ಲಿಯೂ ಬಾಯಿ ಬಿಟ್ಟಿಲ್ಲ. ಅದು ಏಕೆ ಎಂದು ನನಗೆ ಗೊತ್ತಾಗುತ್ತಿಲ್ಲವೆಂದು ತಿಳಿಸಿದರು.
ನಾನಂತೂ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಮರುವಿವಾಹ ಸಿಡಿ ಬಗ್ಗೆ ಅಗತ್ಯ ದಾಖಲೆ ಬಿಡುಗಡೆಗೊಳಿಸಲು ಸಿದ್ಧನಿದ್ದೇನೆ. ಆದರೆ ನನಗೆ ಬೆದರಿಕೆ ಹಾಗೂ ಭಯ ಇರುವುದರಿಂದ ಜೆಡ್ ಪ್ಲಸ್ ಸೆಕ್ಯೂರಿಟಿ ಒದಗಿಸಿ ಎಂದು ರಾಜ್ಯ ಗೃಹ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದೇನೆ ಎಂದರು.