ಮೈಸೂರು: ಕೋಟ್ಯಾಂತರ ರೂಗಳನ್ನು ಖರ್ಚು ಮಾಡಿ ವರ್ಷ ಪೂರ್ತಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಾ ಸಂಭ್ರಮದಲ್ಲಿರುವ ಮೈಸೂರು ವಿವಿಯ ಮಹಿಳಾ ವಸತಿ ನಿಲಯದ ಕೊಠಡಿಗಳ ಶಿಥಿಲ ವ್ಯವಸ್ಥೆಯಲ್ಲಿದ್ದು, ಛಾವಣಿ ಕುಸಿತ ಭೀತಿಯಲ್ಲಿ ವಿದ್ಯಾರ್ಥಿನಿಯರಿದ್ದಾರೆ.
ಕಳೆದ ಒಂದು ವಾರದಿಂದ ಮೈಸೂರು ವಿಶ್ವ ವಿದ್ಯಾನಿಲಯದ ಮಾನಸ ಗಂಗೋತ್ರಿಯ ಪಿಜಿ ಮಹಿಳಾ ವಿದ್ಯಾರ್ಥಿ ನಿಲಯದ ಬ್ಲಾಕ್-2 ನ ಹಲವು ಕೊಠಡಿಗಳು ಶಿಥಿಲ ವ್ಯವಸ್ಥೆ ತಲುಪಿವೆ. ಅದರಲ್ಲೂ ಎರಡು ಕೊಠಡಿಗಳಲ್ಲಿ ಮೂರು ದಿನಗಳಿಂದ ಚಾವಣಿ ಸಹ ಕುಸಿಯುತ್ತಿದ್ದ ಅಲ್ಲೇ ಇರುವ ವಿದ್ಯಾರ್ಥಿನಿಯರು ಹೆದರಿ ರೂಮಿನಿಂದಲೇ ಹೊರಗೆ ಬರುತ್ತಿದ್ದಾರೆ. ಈ ಹಿಂದೆಯೇ ಹಲವು ಬಾರಿ ಶಿಥಿಲ ವ್ಯವಸ್ಥೆಯಲ್ಲಿರುವ ಕೋಣೆಗಳನ್ನು ಸರಿಪಡಿಸಿ ಎಂದು ಮನವಿ ಮಾಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ನಡು ರಾತ್ರಿವೇಳೆ ಚಾವಣಿ ಕುಸಿಯುತ್ತಿರುವುದು ಭಯವನ್ನು ಉಂಟು ಮಾಡಿದೆ ಅಲ್ಲಿನ ವಿದ್ಯಾರ್ಥಿನಿಯರಿಗೆ.