ಮೈಸೂರು: ದೇಶದಲ್ಲಿಯೇ ಅತಿಹೆಚ್ಚು ಹುಲಿಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕರ್ನಾಟಕದಲ್ಲಿ ಹುಲಿಗಳ ಆವಾಸ ಸ್ಥಾನ ನಾಗರಹೊಳೆ- ಬಂಡೀಪುರ ಅಭಯಾರಣ್ಯವಾಗಿದೆ. ಇಂತಹ ಅಭಯಾರಣ್ಯದಲ್ಲಿ ಪ್ರವಾಸಿಗರೊಬ್ಬರ ಮೊಬೈಲ್ಗೆ ಹುಲಿಗಳ ಹಿಂಡು ಸೆರೆಯಾಗಿದೆ.
ಕಳೆದ ತಿಂಗಳಷ್ಟೇ ಕೊಡಗಿನ ಕಾಫಿ ತೋಟವೊಂದರಲ್ಲಿ ಹಸುವೊಂದನ್ನು ನಾಲ್ಕು ಹುಲಿ ಮರಿಗಳೊಂದಿಗೆ ತಿನ್ನುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಎಲ್ಲರ ಗಮನ ಸೆಳೆದಿತ್ತು. ಅ ನಂತರ ಆ ಹುಲಿಗಳು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಕಳೆದ ಭಾನುವಾರ ನಾಗರಹೊಳೆ ಕುಟ್ಟಾ ರಸ್ತೆಯ ಕಲ್ಲಹಳ್ಳಿ ಬಳಿಯ ರಸ್ತೆಯಲ್ಲಿ ಮೂರು ಹುಲಿ ಒಂದು ಮರಿ ಹುಲಿ ರಸ್ತೆ ದಾಟುತ್ತಿರುವ ದೃಶ್ಯವನ್ನು ಪ್ರವಾಸಿಗರು ಚಿತ್ರೀಕರಿಸಿ ಸಾಮಾಜಿಕ ಜಾಲಾತಾಣಗಳಿಗೆ ಹರಿಬಿಟ್ಟಿದ್ದಾರೆ.
ಇಂತಹ ಹುಲಿ ಹಿಂಡಿರುವ ಜಲಕ್ ವಿಡಿಯೋ ನೋಡಿ ಅರಣ್ಯಾಧಿಕಾರಿಗಳು ಈ ಹುಲಿಗಳು ನಾಗರಹೊಳೆ ವ್ಯಾಪ್ತಿಯ ಹುಲಿಗಳೇ ಅಥವಾ ಕಳೆದ ತಿಂಗಳು ಕೊಡಗಿನ ತೋಟವೊಂದರಲ್ಲಿ ಕಾಣಿಸಿಕೊಂಡ ಹುಲಿಗಳೇ ಎಂದು ಖಚಿತಪಡಿಸಿದ್ದಾರೆ.