ಮೈಸೂರು: ಮೈಸೂರಿನ ಜೆಕೆ ಮೈದಾನದಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಗೋಪಾಲಕರ ಸಂಘದಿಂದ ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆಯನ್ನು ಅಯೋಜಿಸಲಾಗಿದ್ದು, ಅದರಲ್ಲಿ ಕೋಲಾರದ ಕಾಮಧೇನು ಹಸುವೊಂದು ಬರೋಬ್ಬರಿ ದಿನಕ್ಕೆ 42 ಲೀಟರ್ ಹಾಲು ಕರೆಯುವ ಮೂಲಕ ಎಲ್ಲರ ಗಮನ ಸೆಳೆಯಿತು.
ಒಟ್ಟಾರೆ ಕೋಲಾರ, ಬೆಂಗಳೂರು, ಚೆನ್ನರಾಯನ ಪಟ್ಟಣ, ಮದ್ದೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ 17 ಗೋವುಗಳು ಸ್ಪರ್ಧೇಯಲ್ಲಿ ಭಾಗವಹಿಸಿದ್ದು, ಇಂದು ಮತ್ತು ನಾಳೆ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯಲ್ಲಿ ಅತಿ ಹೆಚ್ಚು ಹಾಲು ಕರೆದು ಪ್ರಥಮ ಸ್ಥಾನಗಳಿಸಿದ ಗೋವಿನ ಮಾಲೀಕರಿಗೆ ಒಂದು ಲಕ್ಷ, ದ್ವೀತಿಯ ಬಹುಮಾನ 75 ಸಾವಿರ, ತೃತೀಯ ಬಹುಮಾನ 50 ಸಾವಿರ ಹಾಗೂ ಸಮಾಧಾನಕರ ಬಹುಮಾನವಾಗಿ 25 ಸಾವಿರವನ್ನು ಸಂಘ ನೀಡುತ್ತಿದೆ.