ಮೈಸೂರು: ಇಲ್ಲಿನ ಡಿಸಿ ಆಫೀಸ್ ಗೆ ಕಂಟ್ರೋಲ್ ರೂಮ್ಗೆ ಅನಾಮಿಕ ವ್ಯಕ್ತಿಯೊಬ್ಬ ಬಾಂಬ್ ಬೆದರಿಕೆ ಕರೆ ಮಾಡಿ ಬೆಚ್ಚಿ ಬೀಳಿಸಿದ ಘಟನೆ ಇಂದು ಮೈಸೂರಿನಲ್ಲಿ ನಡೆದಿದೆ.
ಅನಾಮಿಕರ ಕರೆಯಿಂದ ಬೆಚ್ಚಿದ ಸಿಬ್ಬಂದಿ ಹಾಗೂ ಡಿಸಿ ಸೇರಿದಂತೆ ಎಲ್ಲರೂ ಕಚೇರಿಯಿಂದ ಹೊರ ಓಡಿ ಬಂದು ಜಿಲ್ಲಾಧಿಕಾರಿಗಳು ತಕ್ಷಣ ನಗರ ಪೊಲೀಸ್ ಆಯುಕ್ತರಿಗೆ ಕರೆ ಮಾಡಿ ಬಾಂಬ್ ಬೆದರಿಕೆ ಕರೆ ಬಂದಿರುವ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸ್ ಇಲಾಖೆ ಬಾಂಬ್ ಸ್ಕ್ವಾಡ್, ಬೆರಳಚ್ಚು ತಜ್ಞರು, ಶ್ವಾನ ದಳ ಡಿಸಿಪಿ ನೇತೃತ್ವದಲ್ಲಿ ಸುಮಾರು 2 ಗಂಟೆಗೂ ಹೆಚ್ಚು ತಪಾಸಣೆ ನಡೆಸಿದರು.
ಆದರೆ ತಪಾಸಣೆ ವೇಳೆಯಲ್ಲಿ ಯಾವುದೇ ಬಾಂಬ್ ಪತ್ತೆಯಾಗಿಲ್ಲದ ಹಿನ್ನಲೆಯಲ್ಲಿ ಇದೊಂದು ಹುಸಿ ಬಾಂಬ್ ಕರೆ ಎಂದು ಡಿಸಿ ಹೇಳಿಕೆ. ತಪಾಸಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಸಿ.ಶಿಖಾ ಬೆಳ್ಳಗ್ಗೆ ಕರೆ ಬಂದ ತಕ್ಷಣ ಕಮೀಷನರ್ ಅವರಿಗೆ ತಿಳಿಸಿದ್ದು ಸಿಬ್ಬಂದಿಯವರು ಜಿಲ್ಲಾಧಿಕಾರಿ ಕಚೇರಿಯನ್ನು ಸಂಪೂರ್ಣ ತಪಾಸಣೆ ನಡೆಸಿದ್ದು, ಇದೊಂದು ಹುಸಿ ಬಾಂಬ್ ಕರೆ ಎಂದು ದೃಢ ಪಟ್ಟಿದ್ದು, ಆದರೂ ಸಿಬ್ಬಂದಿಯವರಿಗೆ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ತಿಳಿಸಿದರು.
ನಾಳೆ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ದೇಶದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದ್ದು, ಈ ನಡುವೆ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿರುವುದು ಎಲ್ಲರನ್ನು ಗಾಬರಿಗೊಳಿಸಿದೆ. ಈ ಹಿನ್ನಲೆಯಲ್ಲಿ ನಾಳೆವರೆಗೂ ನಗರದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.