ಮೈಸೂರು: ನಂಜನಗೂಡು ಸಮೀಪದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಐಟಿಸಿ ಸಿಗರೇಟು ತಯಾರಿಕ ಕಂಪನಿಯು ಏಕಾಎಕಿ 469 ಕಾರ್ಮಿಕರನ್ನು ಹೊರಹಾಕಿದ್ದು, ಕಾರ್ಖಾನೆಯ ನಿರ್ಧಾರವನ್ನು ಖಂಡಿಸಿ ಕಾರ್ಮಿಕರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಪ್ರತಿ ಬಾರಿ ಎಪ್ರಿಲ್ನಿಂದ 45 ದಿನಗಳು ಹೊಗೆಸೊಪ್ಪು ಸಂಗ್ರಹ ಇರುವುದಿಲ್ಲ. ಹಾಗಾಗಿ ಅಷ್ಟೂ ದಿನ ಮಾತ್ರ ಕಾರ್ಖಾನೆ ಮುಚ್ಚುವುದು ಸಾಮಾನ್ಯ. ಆದರೆ ಈಗ ಕಾರ್ಖಾನೆಯಲ್ಲಿ ಅಗತ್ಯ ಹೊಗೆಸೊಪ್ಪು ಇದ್ದರೂ ಸಹ ಕಚ್ಚಾವಸ್ತು ಸಂಗ್ರಹ ಇಲ್ಲವೆಂದು ಸುಳ್ಳು ಹೇಳಿ ನಮ್ಮನ್ನೂ ಹೊರ ಹಾಕಿದ್ದಾರೆ ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ.
ಕಾರ್ಮಿಕರೆಲ್ಲರ ಪೈಕಿ ಒಂದು ಗುಂಪು ಸಿಐಟಿಯು(ಸೆಂಟ್ರಲ್ ಟ್ರೆಂಡ್ ಯೂನಿಯನ್ ಕಾಂಗ್ರೆಸ್) ಎಂಬ ಸಂಘಟನೆಯನ್ನು ಸ್ಥಾಪಿಸಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿತ್ತು. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ನಿಗದಿತ ಕಾರ್ಮಿಕರಿಗೆ ಅಗತ್ಯವಾಗಿ ನೀಡಬೇಕಾದ ಕೆಲವೊಂದು ಸೌಲಭ್ಯಗಳನ್ನು ಕೇಳಲು ಮುಂದಾಗಿತ್ತು. ಆದರೆ ಅಷ್ಟರಲ್ಲಿ ಈ ಬಗ್ಗೆ ತಿಳಿದ ಕಾರ್ಖಾನೆಯ ಹಿರಿಯ ಅಧಿಕಾರಿಗಳು ಕಾರ್ಖಾನೆಯಿಂದಲೇ ಎಲ್ಲಾ ಕಾರ್ಮಿಕರನ್ನು ಹೊರ ಹಾಕಿದೆ. ಇದನ್ನು ಖಂಡಿಸಿರುವ ಕಾರ್ಮಿಕರು ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.