ಮೈಸೂರು: ಮೈಸೂರಿನಲ್ಲಿ ಅಪರಿಚಿತ ದುಷ್ಕರ್ಮಿಗಳು ವಕೀಲರೊಬ್ಬರ ಕಚೇರಿಗೆ ಕನ್ನ ಹಾಕಿ ನಗದನ್ನು ದೋಚಿ ಪರಾರಿ ಯಾಗಿರುವ ಘಟನೆ ಜಯನಗರದಲ್ಲಿ ನಡೆದಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಕೀಲ ಉಮೇಶ್ ಅವರ ಜಯನಗರದ ಕಚೇರಿಗೆ ಕನ್ನ ಹಾಕಿದ ದುಷ್ಕರ್ಮಿಗಳು ಬಾಗಿಲು ಮುರಿದು ಕಚೇರಿಯಲ್ಲಿ ಹಾಕಿದ್ದ ಸಿಸಿಟಿವಿಯನ್ನು ಧ್ವಂಸಗೊಳಿಸಿದ್ದಾರೆ. ಬಳಿಕ ಕಚೇರಿಯಲ್ಲಿದ್ದ ಹಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಇಂದು ಎಂದಿನಂತೆ ಕಚೇರಿಗೆ ಬಂದ ಉಮೇಶ್ ಹಣ ಕಳವಾಗಿರುವ ಬಗ್ಗೆ ತಿಳಿದಿದೆ.
ಕೂಡಲೇ ಅಶೋಕಪುರಂ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶ್ವಾನದಳ, ಬೆರಳಚ್ಚು ದಳ ತನಿಖೆ ಕೈಗೊಂಡಿದ್ದಾರೆ. ಅಲ್ಲದೆ ಧ್ವಂಸಗೊಂಡ ಸಿಸಿಟಿವಿಯಲ್ಲಿ ಕಳ್ಳನ ಫೋಟೊ ಸಿಕ್ಕಿದ್ದು ಇದರ ಬೆನ್ನು ಹತ್ತಿ ಆತನನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.