ಮೈಸೂರು: ಗುಂಡು ಪಾರ್ಟಿಗೆ ಬರಲು ಒಪ್ಪದಿದ್ದಾಗ ಸ್ನೇಹಿತನಿಗೆ ಯುವಕರಿಬ್ಬರು ಸೇರಿಕೊಂಡು ಬ್ಲೇಡ್ನಿಂದ ಹಲ್ಲೆಗೈದು, ದೊಣ್ಣೆಯಿಂದ ಹೊಡೆದ ಘಟನೆ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು ನಗರದ ಮಂಡಿ ಮೊಹಲ್ಲಾದ ಹಣ್ಣಿನ ವ್ಯಾಪಾರಿ ನುಸ್ರುಲ್ಲಾ ಖಾನ್ ರಾತ್ರಿ ಲಷ್ಕರ್ ಮೊಹಲ್ಲಾದ ಕೇರಳ ಮಸೀದಿ ಬಳಿ ಸಪೋಟ ಹಣ್ಣಿನ ವ್ಯಾಪಾರ ಮುಗಿಸಿ ಹಣದೊಂದಿಗೆ ಬರುವಾಗ ಸ್ನೇಹಿತರಾದ ಪ್ರಜ್ವಲ್, ಪಮ್ಮಿ, ಹೈದಾ, ಟ್ಯಾಬ್ ಎಂಬುವವರು ನಸ್ರುಲ್ಲಾನ ಹಣ ಕಂಡು ಆತನನ್ನು ಅಡ್ಡಗಟ್ಟಿ ಗುಂಡು ಪಾರ್ಟಿಗೆ ಬರುವಂತೆ ಪೀಡಿಸಿದ್ದಾರೆ. ಆದರೆ ನಸ್ರುಲ್ಲಾ ನಾನು ಮನೆಗೆ ಹೋಗಬೇಕು ಪಾರ್ಟಿಗೆ ಬರಲ್ಲವೆಂದು ಹೇಳಿದಕ್ಕೆ ಕುಪಿತಗೊಂಡ ಯುವಕರು ನಸ್ರುಲ್ಲಾನ ಕೈಗೆ ಬ್ಲೇಡ್ ಹಾಕಿ ದೊಣ್ಣೆಯಿಂದ ಹೊಡೆದು ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹಲ್ಲೆಗೆ ಒಳಗಾದ ನಸ್ರುಲ್ಲಾ ಈ ಸಂಬಂಧ ಮಂಡಿ ಪೊಲೀಸ್ ಠಾಣೆಗೆ ಆಗಮಿಸಿ ಸ್ನೇಹಿತರ ವಿರುದ್ಧ ದೂರು ದಾಖಲಿಸಿದ್ದಾನೆ.