News Kannada
Tuesday, July 05 2022

ಮೈಸೂರು

ಹುಣಸೂರಿನಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆ - 1 min read

Photo Credit :

ಹುಣಸೂರಿನಲ್ಲಿ ಹಂದಿ ಹಿಡಿಯುವ ಕಾರ್ಯಾಚರಣೆ

ಮೈಸೂರು: ನಗರಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಅವುಗಳ ಹಾವಳಿ ತಪ್ಪಿಸಿ ಎಂದು ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಮೊರೆ ಹೋಗುವುದು ಸಾಮಾನ್ಯ. ಆದರೆ ಹುಣಸೂರಿನಲ್ಲಿ ಮಾತ್ರ ಇದಕ್ಕೆ ತದ್ವಿರುದ್ದ. ಅಲ್ಲಿನ ಜನ ನಮಗೆ ಬೀದಿ ನಾಯಿಗಳಿಗಿಂತ ಹಂದಿಗಳ ಹಾವಳಿಯೇ ಜಾಸ್ತಿಯಾಗಿದ್ದು, ಅವುಗಳಿಂದ ಮುಕ್ತಿತೋರಿಸಿ ಎಂದು ನಗರಸಭೆ ಮುಂದೆ ಅವಲತ್ತುಗೊಂಡಿದ್ದಾರೆ.


ಹುಣಸೂರಿನಲ್ಲಿ ಹಂದಿ ಸಾಕುವವರ ಸಂಖ್ಯೆ ಹೆಚ್ಚಾಗಿದೆ. ಅವುಗಳನ್ನು ಬೀದಿಗೆ ಬಿಡುವುದರಿಂದ ಅವು ನಗರದಲ್ಲೆಲ್ಲ ಎಲ್ಲೆಂದರಲ್ಲಿ ಓಡಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿವೆ. ಈ ಹಂದಿಗಳನ್ನು ಹಂದಿಜೋಗಿಗಳೆಂಬ ಜನಾಂಗದವರು ಸಾಕುತ್ತಿದ್ದು, ಅವರ ಬಡಾವಣೆಯಿಂದ ಹೊರ ಬರುವ ಹಂದಿಗಳು ಸಾರ್ವಜನಿಕರಿಗೆ ಕಾಟ ಕೊಡುತ್ತಿವೆ. ಇವುಗಳ ಹಾವಳಿಯಿಂದ ಬೇಸತ್ತ ಜನ ಹಂದಿಗಳಿಂದ ನಮಗೆ ಮುಕ್ತಿಕೊಡಿ ಎಂದು ಕೇಳುತ್ತಲೇ ಬರುತ್ತಿದ್ದಾರೆ.

ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾದ ಕಾರಣ ಸಾರ್ವಜನಿಕರು ಕೂಡಲೇ ಹಂದಿಗಳನ್ನು ಹಿಡಿದು ನಗರದಲ್ಲಿ ಆಗುತ್ತಿರುವ ಕಿರಿಕಿರಿ ತಪ್ಪಿಸಿ ಎಂದು ನಗರ ಸಭೆಗೆ ಮನವಿ ಮಾಡಿದ್ದರು. ಇದರಿಂದ ಎಚ್ಚೆತ್ತುಗೊಂಡ ನಗರಸಭೆಯ ಅಧಿಕಾರಿಗಳು  ಬಿಡಾಡಿಯಾಗಿ ಅಲೆದಾಡುವ ಹಂದಿಗಳನ್ನು ಹಿಡಿಯಲಿರುವ ಕಾರಣ ಹಂದಿ ಸಾಕಣಿಕೆದಾರರು ನಗರದ ಹೊರಭಾಗದಲ್ಲಿ ಮತ್ತು ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಾಕಲು  3 ತಿಂಗಳ ಹಿಂದೆಯೇ ಗಡುವು ನೀಡಿದ್ದರು.

ಆದರೆ ನಗರ ಸಭೆಯ ಸೂಚನೆಗೆ ಹಂದಿಗಳ ಮಾಲೀಕರು ಸ್ಪಂದಿಸಿರಲಿಲ್ಲ. ಇದರಿಂದ ನಗರದಲ್ಲಿ ಕಾರ್ಯಾಚರಣೆ ನಡೆಸಿದ ನಗರಸಭೆ  ಸಂತೆಮಾಳ, ಮಾರುತಿ ಬಡಾವಣೆ, ಕರಿಗೌಡರ ಬೀದಿ, ಸರಸ್ವತಿಪುರಂ, ಬಿ.ಎಂ.ರಸ್ತೆಯ ಗೌತಮ್ ಪೆಟ್ರೋಲ್ ಬಂಕ್ ಸುತ್ತಮುತ್ತ ಇದ್ದಂತಹ ಸುಮಾರು 70ಕ್ಕೂ ಹೆಚ್ಚು ಹಂದಿಗಳನ್ನು ಹಿಡಿಯಲಾಯಿತು.

ಈ ಸಂದರ್ಭ ಹಂದಿ ಸಾಕಣಿಕೆದಾರರು ಹಂದಿಗಳನ್ನು ಸ್ಥಳಾಂತರಿಸಲು ಕಾಲಾವಕಾಶ ಕೇಳುತ್ತಿದ್ದರೆ, ಮತ್ತೆ ಕೆಲವರು ಹಂದಿ ಹಿಡಿಯುವ ಕಾರ್ಯಕ್ಕೆ ಅಡ್ಡಿ ಮಾಡಲು ಪ್ರಯತ್ನಿಸಿದರು. ಆದರೆ ನಗರಸಭೆ ನೌಕರರು ಯಾವುದನ್ನು ಲೆಕ್ಕಿಸದೆ ಹಂದಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.

See also  ಜಾಹೀರಾತು ಫಲಕ ತೆರವಿಗೆ ಕಾಲ ಕೂಡಿ ಬಂದಿಲ್ಲ.!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು