News Kannada
Tuesday, July 05 2022

ಮೈಸೂರು

ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ: ಭಗವಾನ್ ವಿರುದ್ಧ ದೂರು ದಾಖಲು - 1 min read

Photo Credit :

 ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ: ಭಗವಾನ್ ವಿರುದ್ಧ ದೂರು ದಾಖಲು

ಮೈಸೂರು: ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನಲೆಯಲ್ಲಿ ಪ್ರೊಫೆಸರ್ ಭಗವಾನ್ ವಿರುದ್ಧ ಜಯಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ಶುಕ್ರವಾರ ಮೈಸೂರಿನ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ದಲಿತ ಒಕ್ಕೂಟದವತಿಯಿಂದ ಏರ್ಪಡಿಸಿದ್ದ ಹೈದರಾಬಾದ್‍ನ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರೊ. ಭಗವಾನ್ ಶ್ರೀರಾಮ ಒಬ್ಬ ಆದರ್ಶ ಪುರುಷ ಅಲ್ಲಾ. ಅವನಿಗೆ ತನ್ನ ಪುರುಷತ್ವದ ಬಗ್ಗೆ ನಂಬಿಕೆ ಇರಲಿಲ್ಲ. ಅವನಿಗೆ ತನ್ನ ಹೆಂಡತಿಯ ಶೀಲದ ಸಂಶಯಗೊಂಡು ಕಾಡಿಗೆ ಕಳುಹಿಸಿದ ನಂತರ ಶೀಲಾಶಂಕಿಸಿ ಅಗ್ನಿ ಪರೀಕ್ಷೆ  ಮಾಡಿದ ಎಂದು ವಿವಾದ್ಮಕ ಹೇಳಿಕೆ ನೀಡಿದ್ದರು.

ಪ್ರೊಫೆಸರ್ ಭಗವಾನ್ ಅವರ ಈ ಹೇಳಿಕೆ ಹಿಂದೂ ಧರ್ಮಿಗಳ ಭಾವನೆಗೆ ಧಕ್ಕೆ ತರುವಂತಹದ್ದು ಜತೆಗೆ ಸಮಾಜದಲ್ಲಿ ಪ್ರಚೋದನೆ ಉಂಟು ಮಾಡುವಂತಹ ಹೇಳಿಕೆ ಎಂದು ಸಮಾಜ ಸೇವಕ ಕುಮಾರ್ ಗೌಡ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರೊಫೆಸರ್ ಭಗವಾನ್ ವಿರುದ್ಧ 295 ಎ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

See also  ಮಹಿಳಾ ದಸರಾ ಮತ್ತು ಉದ್ಯಮ ಸಂಭ್ರಮ ಉದ್ಘಾಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು