News Kannada
Thursday, July 07 2022

ಮೈಸೂರು

ಅಪ್ರಾಪ್ತೆ ಬಾಲಕಿಯ ಅಪಹರಣ: ಆರೋಪಿಯ ಬಂಧನ - 1 min read

Photo Credit :

ಅಪ್ರಾಪ್ತೆ ಬಾಲಕಿಯ ಅಪಹರಣ: ಆರೋಪಿಯ ಬಂಧನ

ಮೈಸೂರು: ಪ್ರೀತಿಯ ನಾಟಕವಾಡಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದು, ಅನುಮಾನದ ಬೆನ್ನು ಹತ್ತಿದ್ದ ಬಾಲಕಿಯ ತಾಯಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಘಟನೆ ಮೈಸೂರಿನಲ್ಲಿ  ನಡೆದಿದೆ.

ಪಿಜಾರಾ ತಾಲೂಕಿನ ಲಪ್ಪಾಲ ಗ್ರಾಮದ ರವಿ(ರಫಿಕ್-21) ಬಂಧಿತ ಆರೋಪಿ.  ಮೈಸೂರು-ಬೆಂಗಳೂರು ಮುಖ್ಯರಸ್ತೆಯ ರಿಂಗ್ ಹೈವೆ  ಸರ್ಕಲ್‍ನಲ್ಲಿ ಟೀ ಮಾರಿಕೊಂಡು ಬದುಕು ನಡೆಸುತ್ತಿದ್ದ ಕುಟುಂಬದಲ್ಲಿ 14 ವರ್ಷದ ಒಬ್ಬಳೇ ಮಗಳು ಒಂದು ದಿನ ನಾಪತ್ತೆಯಾಗಿದ್ದಾಳೆ. ಕಂಗಾಲಾದ ತಾಯಿ- ತಂದೆ ಮಗಳಿಗಾಗಿ ಇನ್ನಿಲ್ಲದ ಹುಡುಕಾಟ ನಡೆಸಿ ಎನ್.ಆರ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಿಸಿ ಯಾವುದೇ ಪ್ರಯೋಜನವಾಗದೇ ಕಂಗಾಲಾಗಿದ್ದರು.  

ಮಗಳು ಕಾಣೆ ಆಗುವುದಕ್ಕೂ ಮೂರು ದಿನಗಳ ಮುಂಚೆ ತಮ್ಮ ಅಂಗಡಿಯ ಬಳಿಯೇ ಇರುತ್ತಿದ್ದ ರಾಜಸ್ಥಾನದ ಅಲ್ಫಾ ಜಿಲ್ಲೆಯ ಪಿಜಾರಾ ತಾಲೂಕಿನ ಲಪ್ಪಾಲ ಗ್ರಾಮದ ರವಿ(ರಫಿಕ್) ಮೇಲೆ ಸಣ್ಣದೊಂದು ಅನುಮಾನ ಬೆಳೆದು ಆತನ ಬೆನ್ನು ಹತ್ತಿದ್ದರು ತಾಯಿ. ಆತನ ಸಿಕ್ಕ ಬಾಡಿಗೆಗಳೆಲ್ಲವನ್ನೂ ಬಿಟ್ಟು ಟೀ ಅಂಗಡಿಯ ಬಳಿಯೇ ಇರುತ್ತಿದ್ದಕ್ಕೆ ತಾಯಿಗೆ ಆತನ ಮೇಲೆ ದಟ್ಟ ಅನುಮಾನವೇ ಮೂಡಿತ್ತು.  ಕೊನೆಗೆ ಆತ ಓಡಿಸುತ್ತಿದ್ದ ಟ್ರಕ್ ನಂಬರ್ ನೆನಪು ಮಾಡಿಕೊಂಡು ಅದರ ಜಾಡೂ ಹಿಡಿದ ತಾಯಿ ಆತನ ರಾಜಾಸ್ತಾನದ ಮೂಲ ತಿಳಿದು ಅಲ್ಲಿಗೆ ಪಯಣಿಸಿದ್ದಳು.

ತಾಯಿ ರಾಜಸ್ಥಾನ್‍ನತ್ತ ಪಯಣಿಸುತ್ತಿದ್ದಂತೆ ಅವರಿಗೆ ಕರೆ ಮಾಡಿದ ಟ್ರಕ್ ಚಾಲಕ ರವಿ ನಿಮ್ಮ ಮಗಳನ್ನು ಹುಡುಕಬೇಡಿ, ಅವಳನ್ನು ಹುಡುಕಿಕೊಂಡು ನೀವು ಬಂದರೆ ನಿಮಗೆ ಸಿಗುವುದು ಅವಳ ಹೆಣ ಎಂದು ಬೆದರಿಕೆ ಹಾಕಿದ್ದನ್ನು ಮೀರಿ ತಾಯಿ ರಾಜಸ್ಥಾನಗೆ ಹೋಗಿ ಅಲ್ಲಿ ಮಗಳ ಹುಡಾಕಾಟ ನಡೆಸಿದಳು. ಮಗಳಿಗಾಗಿ ರಾಜಾಸ್ಥಾನದ ಲಪ್ಪಾಲ ಗ್ರಾಮ ಸೇರಿ ರವಿ ಮನೆಯನ್ನು ಪತ್ತೆ ಹಚ್ಚಿದ ತಾಯಿಗೆ ರವಿಗೆ ಈಗಾಗಲೇ ಮದುವೆಯಾಗಿ ಸಂಸಾರ ಇರುವ ಬಗ್ಗೆ ತಿಳಿಯಿತು. ಆಕೆಯ ಗ್ರಾಮಸ್ಥರ ಸಹಾಯ ಹಸ್ತದ ಮೂಲಕ ಮಗಳ ಪತ್ತೆಗಾಗಿ ಶುರು ಮಾಡಿದಳು.

ಮೂರು ದಿನಗಳು ಕಳೆದರೂ ಮಗಳ ಸುಳಿವು ಸಿಗದೆ ಹುಡುಕಾಡುತ್ತಿದ್ದಾಗ ಮಗಳೆ ತಾಯಿಗೆ ಕರೆ ಮಾಡಿ ತಾನಿರುವ ಜಾಗವನ್ನು ಹೇಳಿದ್ದಾಳೆ. ಎನ್.ಆರ್ ಠಾಣೆಯ ಪೊಲೀಸರ ನೆರವಿನೊಂದಿಗೆ ಆಕೆ ಕಾಲ್ ಆಧರಿಸಿದಾಗ ರವಿ ಮನೆಯಲ್ಲೇ ಬಾಲಕಿ ಇರುವುದು ಪತ್ತೆಯಾಗಿ ಕೊನೆಗೆ ರವಿ ಹೆಂಡತಿಯ ಮನವೊಲಿಸಿದ ತನ್ನ ಮಗಳನ್ನು ಮೈಸೂರಿಗೆ ಕರೆತಂದಿದ್ದಾರೆ. ಕೊನೆಗೆ ತಾಯಿಯ ಹಿಂದೆಯೇ ಇದ್ದ ಪೊಲೀಸರು ಸ್ಥಳೀಯರ, ಪೊಲೀಸರ ಸಹಾಯದಿಂದ ರವಿಯನ್ನು ಬಂಧಿಸಿ ಮೈಸೂರಿಗೆ ಕರೆತಂದಿದ್ದಾರೆ.

See also  ಮನ್ ಕಿ ಬಾತ್ ನಲ್ಲಿ ಪ್ರಧಾನಿ ಪ್ರಸಂಶೆಯಿಂದ ಖುಷಿಯಾಗಿದೆ: ಸಂತೋಷ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು