ಮೈಸೂರು: ಕಂದಮ್ಮನೊಂದಿಗೆ ಮೃಗಾಲಯಕ್ಕೆ ಭೇಟಿ ನೀಡುವ ಮಹಿಳೆಯರಿಗೆ ತಮ್ಮ ಮಗುವಿಗೆ ಹಾಲುಣಿಸಲು ಮೃಗಾಲಯ ಹಾಲುಣಿಸುವ ಕೇಂದ್ರವನ್ನು ತೆರೆದಿದೆ.
ದೇಶದ ಗಮನ ಸೆಳೆದಿರುವ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ತಾಯಂದಿರ ಕಸಿವಿಸಿ ತಪ್ಪಿಸುವ ನಿಟ್ಟಿನಲ್ಲಿ ಮತ್ತೊಂದು ದಾಪುಗಾಲು ಇಟ್ಟು ಮತ್ತೆ ಗಮನ ಸೆಳೆದಿದೆ. ದೇಶದ ಯಾವುದೇ ಮೃಗಾಲಯದಲ್ಲೂ ಇಲ್ಲದ ಹಾಲುಣಿಸುವ ಕೇಂದ್ರವನ್ನು ಮೈಸೂರು ಮೃಗಾಲಯದಲ್ಲಿ ತೆರಯುವ ಮೂಲಕ ಮತ್ತೊಮ್ಮೆ ತಾನೂ ಜನಸ್ನೇಹಿ ಎಂಬುದನ್ನು ತೋರಿಸಿಕೊಟ್ಟಿದೆ.
ಪ್ರತಿನಿತ್ಯ ಸಾವಿರಾರು ಮಂದಿ ಆಗಮಿಸುವ ಮೃಗಾಲಯಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವವರು ಮಹಿಳೆಯರೇ ಅಲ್ಲದೆ ಅವರೊಟ್ಟಿಗೆ ಮುಗ್ಧ ಕೂಸುಗಳನ್ನು ಕರೆತರುವುದು ಸಾಮಾನ್ಯ. ಸುಮಾರು ಮೃಗಾಲಯದಲ್ಲಿ ನಾಲ್ಕು ತಾಸಿಗೂ ಅಧಿಕ ಕಾಲ ಮೃಗಾಲಯದಲ್ಲಿ ಕಳೆಯುತ್ತಾರೆ. ಈ ವೇಳೆ ತಮಗೆ ಸಿಕ್ಕ ಮರೆಯಲ್ಲೇ ಕುಟುಂಬ ಸದಸ್ಯರ ರಕ್ಷಣೆಯಲ್ಲೇ ಹಾಲುಣಿಸುತ್ತಿದ್ದರು. ಇನ್ನೂ ಕೆಲವೊಂದು ಸಮಯದಲ್ಲಿ ಸೀರೆ ಪರದೆಯಲ್ಲಿ ಹಾಲುಣಿಸುತ್ತಿದದ್ದು ಸಾಮಾನ್ಯ ಇತಂಹ ವೇಳೆಯಲ್ಲಿ ಯಾರಾದರೂ ಅಚ್ಚಾನಕ್ಕಾಗಿ ಬಂದರು ಮಹಿಳೆಯರು ಅಲ್ಲೇ ಮುಜುಗರದಿಂದ ಸಮಸ್ಯೆ ಹೇಳಿಕೊಳ್ಳಲಾಗದೆ ತಡಪಡಿಸಿದ ಸನ್ನಿವೇಶ ನಿತ್ಯ ನಡೆಯುತ್ತಲೇ ಇದ್ದವು.
ಇದನ್ನು ಗಮನಿಸಿದ ಹಿಂದಿನ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಹಾಗೂ ಉಪನಿರ್ದೇಶಕ ವಿಜಯ್ ಕುಮಾರ್ ಮೃಗಾಲಯದಲ್ಲಿ ಕನಿಷ್ಠ ಮೂರು ಹಾಲುಣಿಸುವ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದ್ದರು. ಆದರೆ ಅದು ಕಾರ್ಯಗತವಾಗಿರಲಿಲ್ಲ.
ಎರಡು ಕೊಠಡಿಗಳಲ್ಲಿ ಯು ಆಕಾರದಲ್ಲಿ ಗ್ರಾನೆಟ್ ಕಲ್ಲನ್ನು ಹಾಕಲಾಗಿದ್ದು, ಕನಿಷ್ಟ 10 ಮಹಿಳೆಯರು ಕುಳಿತುಕೊಳ್ಳಲು ಅವಕಾಶವಿದೆ. ಮಹಿಳೆಯರು ಮಕ್ಕಳಿರುವ ಭಾವಚಿತ್ರ ಜತೆಗೆ ತಾಯಿ ಹಾಲಿನ ಮಹತ್ವದ ಸಂದೇಶಗಳು ಸಹ ಗೋಡೆ ಬರಹದಲ್ಲಿ ಕಾಣ ಸಿಗುತ್ತವೆ. ಮೃಗಾಲಯಕ್ಕೆ ಆಗಮಿಸುವ ಆರಂಭದಲ್ಲೇ ಇತಂಹದೊಂದು ಕೇಂದ್ರ ಇರುವ ಬಗ್ಗೆ ಮಾಹಿತಿ ಫಲಕ ಅಳವಡಿಸಲಾಗಿದ್ದು, ಕುಟುಂಬದೊಂದಿಗೆ ಆಗಮಿಸುವ ಮಾತೆಯರು ಈ ಕೊಠಡಿಗಳನ್ನು ಬಳಸಿಕೊಳ್ಳಬಹುದಾಗಿದೆ.