News Kannada

ಮೈಸೂರು

ಜನಸಾಮನ್ಯರ ತೆರಿಗೆ ದುಡ್ಡಿನಲ್ಲಿ ಕಾಪೋರೇಟರ್ ಗಳ ಜಾಲಿ ಟೂರ್ - 1 min read

ಜನಸಾಮನ್ಯರ ತೆರಿಗೆ ದುಡ್ಡಿನಲ್ಲಿ ಕಾಪೋರೇಟರ್ ಗಳ ಜಾಲಿ ಟೂರ್

ಮೈಸೂರು:  ಜನರ ತೆರಿಗೆ ದುಡ್ಡಿನಲ್ಲಿ ಬೃಹತ್  ಮುಂಬೈ ಮಹಾನಗರಪಾಲಿಕೆಯ 71 ಕಾರ್ಪೋರೇಟರ್ ಗಳು ಮೈಸೂರಿನಲ್ಲಿ ಫ್ಯಾಮಿಲಿ ಜತೆ ಜಾಲಿ ಟೂರ್ ನಡೆಸುತ್ತಿದ್ದ ಸಂದರ್ಭ ಚಿತ್ರೀಕರಿಸಲು ಹೋದ ಮಾಧ್ಯಮದವರ ಮೇಲೆ ಎಗರಾಡಿದ ಘಟನೆ ಗುರುವಾರ ನಡೆದಿದೆ.


ಮುಂಬೈ ಬೃಹತ್ ಮಹಾನಗರಪಾಲಿಕೆ 71 ಮಂದಿ ಕಾಪೋರೇಟರ್ ಗಳು ಸ್ವಚ್ಛನಗರಿ ಮೈಸೂರಿನಲ್ಲಿ ಸ್ವಚ್ಛತೆಯು ಬಗ್ಗೆ ಅಧ್ಯಯನ ನಡೆಸಲು ನಾಲ್ಕು ದಿನದ ಪ್ರವಾಸಕ್ಕಾಗಿ ನಿನ್ನೆ ಸಂಜೆ ಮೊದಲ ತಂಡದಲ್ಲಿ 46 ಮಂದಿ 2 ಲಜ್ಜುರಿ ಬಸ್ಸಿನಲ್ಲಿ ಬಂದಿಳಿದಿದ್ದಾರೆ. ಇವರ ಮೈಸೂರಿನ ಪ್ರತಿಷ್ಠಿತ ಫೈವ್ ಸ್ಟಾರ್ ಹೋಟೆಲ್‍ನಲ್ಲಿ ಫ್ಯಾಮಿಲಿ ಜತೆ ವಾಸ್ತವ್ಯ ಹೂಡಿದ್ದು, ಉಳಿದ ಮುಂಬೈ ಮೇಯರ್ ಸೇರಿದಂತೆ 15 ಫೆಬ್ರವರಿ 6 ರಂದು ಆಗಮಿಸಲಿರುವುದಾಗಿ ತಿಳಿಸಿದ್ದಾರೆ.

ಆದರೆ ಸ್ವಚ್ಛತೆಯ ಅಧ್ಯಯನಕ್ಕಾಗಿ ಜನರ ತೆರಿಗೆ 50 ಲಕ್ಷ ಹಣದಲ್ಲಿ ಅಧ್ಯಯನದ ಹೆಸರಿನಲ್ಲಿ ಇಂದು ಸ್ಟಾರ್ ಹೋಟೆಲ್‍ನಲ್ಲಿ ವಾಸ್ತವ್ಯ ಮಾಡಿ ನಂತರ ಮೈಸೂರು ಅರಮನೆಯನ್ನು ಸುಮಾರು ಒಂದೂ ಗಂಟೆ ಸಮಯ ವೀಕ್ಷಿಸಿ ಮಾಧ್ಯಮದವರೂ ಚಿತ್ರೀಕರಿಸಲು ಹೋದಾಗ ಅವರ ಚಿತ್ರೀಕರಿಸಿದಂತೆ ತಡೆಯೊಡ್ಡಿದ್ದರು. ನಂತರ ಊಟ ಮುಗಿಸಿದ ತಂಡ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ, ಅಲ್ಲಿ 2 ಗಂಟೆಗಳ ಸಮಯ ಮೃಗಾಲಯದ ಪ್ರಾಣಿಗಳನ್ನು ವೀಕ್ಷಿಸಿದರು.

ನಂತರ ಇದನ್ನು ಚಿತ್ರೀಕರಿಸಲು ಹೋದಾಗ ಮಾಧ್ಯಮದವರ ಮೇಲೆ ಹರಿಹಾಯ್ದು ತೆಗೆದಿದ್ದ ಫೋಟೊಗಳನ್ನು ಡಿಲಿಟ್ ಮಾಡಿಸಿ ದೇಶದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ ನಿಮಗೆ ಬೇರೆ ಕೆಲಸವಿಲ್ಲವೇ? ಎಂದು ಮಹಿಳಾ ಕಾರ್ಪೋರೇಟರ್ ಛಾಯಾಗ್ರಾಹಕರೊಂದಿಗೆ ವಾಗ್ವಾದ ನಡೆಸಿ ತೆಗೆದಿದ್ದ ಫೋಟೊವನ್ನು ಡಿಲಿಟ್ ಮಾಡಿ ಕಳುಹಿಸಿದ್ದಾರೆ.

ಜನರ  ತೆರಿಗೆ ದುಡ್ಡಿನಲ್ಲಿ ಅಧ್ಯಯನ ಪ್ರವಾಸ ನೆಪದಲ್ಲಿ ಕುಟುಂಬ ಸಮೇತ ಜಾಲಿ ಟ್ರಿಪ್ ಮಾಡುತ್ತಿರುವ ಕಾಪೋರೇಟರ್ ಗಳು ಕಳೆದ ವಾರದ ಅಧ್ಯಯನ ನೆಪದಲ್ಲಿ ಅಂಡಮಾನ್ ಪ್ರವಾಸವನ್ನು ನಡೆಸಿದ್ದು, ಅಲ್ಲಿಯೂ ಸಹ ಪೊಲೀಸ್ ಅಧಿಕಾರಿಗಳು ಹಾಗೂ ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಅದೇ ವರ್ತನೆಯನ್ನು ಮೈಸೂರಿನಲ್ಲೂ ಮುಂದುವೆರೆಸಿದ್ದಾರೆ.

See also  ಮೈಸೂರು ಅರಮನೆಯಲ್ಲಿ ಇಂದು ಮಹಾರಾಣಿ ತ್ರಿಷಿಕಾ ಸೀಮಂತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು