ಮೈಸೂರು: ರಾಜ್ಯದಲ್ಲಿ ಹಿಂಬದಿಯ ಸವಾರರಿಗೂ ಹೆಲ್ಮೇಟ್ ಕಡ್ಡಾಯವಾದ ಹಿನ್ನಲೆಯಲ್ಲಿ ಈಗ ಹೆಲ್ಮೇಟ್ಗಳ ಬೇಡಿಕೆ ಹೆಚ್ಚಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೆಲ್ಮೇಟ್ ಮಾರಾಟಕ್ಕೂ ಮೇಳ ಆರಂಭಿಸಿ ಗಮನ ಸೆಳೆದಿದೆ.
ಪ್ರತಿಷ್ಠಿತ ಬ್ರಾಂಡೆಡ್ ಕಂಪನಿಗಳ ಹೆಲ್ಮೇಟ್ಗಳು ಕಂಪನಿಯಿಂದ ನೇರವಾಗಿ ಮಾರಾಟ ಮಾಡಲು ಹೆಲ್ಮೇಟ್ ಮೇಳ ಆಯೋಜಿಸಿದ್ದು, ಇಲ್ಲಿ ಐಎಸ್ಐ ಮಾರ್ಕ್ ಒಳಗೊಂಡ ವಿವಿಧ ಕಂಪನಿಯ ಹೆಲ್ಮೇಟ್ಗಳು ದೊರೆಯುತ್ತಿವೆ. ಗ್ರಾಹಕರು ಸಹ ಹೆಲ್ಮೇಟ್ ಖರೀದಿಸಲು ಮುಗಿಬಿದ್ದಿದ್ದು ಪ್ರಪ್ರಥಮವಾಗಿ ನಡೆಯುತ್ತಿರುವ ಹೆಲ್ಮೇಟ್ ಮೇಳಕ್ಕೆ ಉತ್ತಮ ರೀತಿಯ ಸ್ಪಂದನೆ ದೊರೆತಿದೆ ಎನ್ನುತ್ತಾರೆ ಮೇಳದ ಆಯೋಜಕರು.
ಪೊಲೀಸ್ ಇಲಾಖೆ ಮಾಡಿರುವ ಕಡ್ಡಾಯ ಹೆಲ್ಮೇಟ್ ಜಾರಿಯಿಂದ ಹೆಲ್ಮೇಟ್ ಬೆಲೆಗಳು ಹೆಚ್ಚಾಗಿದ್ದು 599 ರಿಂದ 1000 ಸಾವಿರದವರೆಗಿನ ಹೆಲ್ಮೇಟ್ಗಳು ಇಲ್ಲಿ ದೊರೆಯುತ್ತಿವೆ. ಹೆಲ್ಮೇಟ್ ಎಷ್ಟೇ ದುಬಾರಿಯಾಗಿದ್ದರೂ ಕೊಂಡುಕೊಳ್ಳಬೇಕಾದ ಅನಿವಾರ್ಯ ಬೈಕ್ ಸವಾರರದ್ದಾಗಿದೆ. ಒಟ್ಟಾರೆ ಪೊಲೀಸ್ ಇಲಾಖೆ ಮಾಡಿದ ಹಿಂಬದಿಯ ಸವಾರರಿಗೂ ಹೆಲ್ಮೇಟ್ ಕಡ್ಡಾಯದ ನಿರ್ಧಾರ ವಾಹನ ಸವಾರರಿಗೆ ಹೊರೆಯಾಗಿದ್ದರೆ ಹೆಲ್ಮೇಟ್ ತಯಾರಿಕ ಕಂಪನಿಗಳಿಗೆ ಹಬ್ಬವಾಗಿ ಪರಿಣಮಿಸಿದೆ ಎಂಬುದನ್ನು ಹೆಲ್ಮೇಟ್ ಮೇಳ ತೋರಿಸಿಕೊಟ್ಟಿದೆ.ಒಟ್ಟಾರೆ ಹೆಲ್ಮೇಟ್ ಮೇಳದತ್ತ ಮುಖ ಮಾಡಿರುವ ಸಾರ್ವಜನಿಕರು ಹೆಲ್ಮೇಟ್ಗಳ ಭರ್ಜರಿ ಶಾಪಿಂಗ್ ನಡೆಸುತ್ತಿದ್ದಾರೆ.