ಮೈಸೂರು: ಪ್ರವಾಸಿಗರ ತಂಡವೊಂದು ಸಪಾರಿಗೆ ಹೊರಟಾಗ ಗಾಂಭೀರ್ಯ ನಡಿಗೆಯ ಹುಲಿಯೊಂದು ಬಂಡೀಪುರ ರಾಷ್ಟ್ರೀಯ ಉದ್ಯಾಯನವನದಲ್ಲಿ ಕ್ಯಾಮರ ಕಣ್ಣಿಗೆ ಸೆರೆ ಸಿಕ್ಕಿದೆ.
ಜಿಲ್ಲೆಯ ಬಂಡೀಪುರ ವನ್ಯಜೀವಿ ವಲಯದಲ್ಲಿ 88 ಚದರ ಕಿಮೀ ಪ್ರವಾಸೋಸದ್ಯಮ ವಲಯದಲ್ಲಿ 6 ವರ್ಷಗಳ ಹಿಂದೆ ಕಾಣಿಸಿಕೊಂಡ ಈ ಪ್ರಿನ್ಸ್ ಸುಮಾರು ಅರ್ಧದಷ್ಟು ಅಂದರೆ 30-40 ಚದರ ಕಿಮೀ ವ್ಯಾಪ್ತಿಯನ್ನು ತನ್ನ ಗಡಿಯಾಗಿಸಿಕೊಂಡಿದ್ದಾನೆ. ಅಗಸ್ತ್ಯ ಎಂಬ ಹುಲಿ ಸಾವಿನ ಬಳಿಕ ಇಲ್ಲಿ ನೆಲೆಯೂರಿರುವ ಈ ಪ್ರಿನ್ಸ್ ಹುಲಿ ತನ್ನ ಗಡಿಗೆ ಬೇರೆಡೆಗಳಿಂದ ಬಂದ ನಾಲ್ಕೈದು ಹುಲಿಗಳನ್ನು ಹೊಡೆದಾಡಿ ಸಾಯಿಸಿದ್ದಾನೆ.
ನಿನ್ನೆ ಪ್ರವಾಸಿಗರ ತಂಡವೊಂದು ಒಂದು ವ್ಯಾನ್ ಎರಡು ಜೀಪ್ನಲ್ಲಿ ಸಫಾರಿ ಹೊರಟಾಗ ಕಾಣಿಸಿಕೊಂಡಿರುವ ಬಹಳ ಹತ್ತಿರದಿಂದ ಕಾಣಿಸಿಕೊಳ್ಳುವ ಮೂಲಕ ಎಲ್ಲರಿಗೂ ರಸದೌತಣದ ಕೌತುಕವನ್ನೇ ಉಣಬಡಿಸಿದ್ದಾನೆ. ಸುಮಾರು 6 ಕಿಮೀ ವರೆಗೂ ಹುಲಿಯನ್ನೇ ಹಿಂಬಾಲಿಸಿದರು ಅಂಜದೆ ತನ್ನ ಗಾಂಭೀರ್ಯದಿಂದ ಎಲ್ಲರನ್ನು ಸೆಳೆದಿದ್ದಾನೆ.