News Kannada
Wednesday, July 06 2022

ಮೈಸೂರು

ಮಗಳ ಜತೆ ಕೆರೆಗೆ ಹಾರಿ ಆತ್ಮಹತ್ಯೆಗೈದ ತಂದೆ - 1 min read

Photo Credit :

ಮಗಳ ಜತೆ ಕೆರೆಗೆ ಹಾರಿ ಆತ್ಮಹತ್ಯೆಗೈದ ತಂದೆ

ಮೈಸೂರು: ತಂದೆಯೇ ತನ್ನ ಮಗಳನ್ನು ಕೆರೆಗೆ ತಳ್ಳಿ ತಾನೂ ಆತ್ಮಹತ್ಯೆಗೈದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಉದ್ಬೂರು ಸಮೀಪದ ದಡದಹಳ್ಳಿಯಲ್ಲಿ ನಡೆದಿದೆ.


ಸಾವನ್ನಪ್ಪಿದವನೇ ಉದ್ಬೂರು ಗ್ರಾಮದ ನಿವಾಶಿ ರಾಜು(38) ಎಂಬುವವರಾಗಿದ್ದು, ತನ್ನ ಒಂಭತ್ತು ವರ್ಷದ ಸ್ಪೂರ್ತಿ ಮಗಳನ್ನು ಕೆರೆಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ತನ್ನ ಇಬ್ಬರು ಮಕ್ಕಳನ್ನು ಕೆರೆಗೆ ತಳ್ಳಿ ತಾನೂ ಸಾಯಲು ಮುಂದಾದ ತಂದೆ ರಾಜುವಿನಿಂದ ಬಿಡಿಸಿಕೊಂಡು ಓಡಿಬಂದ ಬಾಲಕ ಸೃಜನ್(4) ಸಾವಿನ ದವಡೆಯಿಂದ ಪರಾಗಿ ಬಂದು ಮರುಜನ್ಮ ಪಡೆದಿದ್ದಾನೆ.

ಮಂಗಳವಾರ ಬೆಳ್ಳಗ್ಗೆ 8 ಗಂಟೆಯಲ್ಲೇ ಸ್ಕೂಟರ್ ತೊಳೆಯುವ ನೆಪ ಹೇಳಿದ ತಂದೆ ರಾಜು ಇಬ್ಬರು ಮಕ್ಕಳನ್ನು ಕರೆದೊಯ್ದಿದ್ದಾನೆ. ಆದರೆ ಕೆರೆ ಬಳಿಗೆ ಹೋಗಿ ಇಬ್ಬರು ಮಕ್ಕಳನ್ನು ಹಿಡಿದು ಕೆರೆ ಮಧ್ಯ ಭಾಗದವರೆಗೂ ಆತ್ಮಹತ್ಯೆ ಮಾಡಿಕೊಳ್ಳಲು ಕರೆದುಕೊಂಡು ಹೋಗಿದ್ದಾನೆ. ಅಷ್ಟರಲ್ಲಿ ಭಯಗೊಂಡ ಬಾಲಕ ಬಿಟ್ಟುಬಿಡು ಅಪ್ಪ ಎಂದು ಗೋಳಿಟ್ಟು ತಪ್ಪಿಸಿಕೊಂಡು ಊರು ಸೇರಿದ್ದಾನೆ. ಆದರೆ ಮಗಳು ಸ್ಪೂರ್ತಿಯೊಟ್ಟಿಗೆ ಕೆರೆಯಲ್ಲಿ ಮುಳುಗಿ ರಾಜು ಸಾವನ್ನಪ್ಪಿದ್ದು, ಇವರ ಶವಕ್ಕಾಗಿ ತೀವ್ರವಾದ ಹುಡುಕಾಟ ಶುರುವಾಗಿದೆ.   2006 ರಲ್ಲಿ ಅತ್ತೆ ಮಗಳಾದ ಶಿಲ್ಪಾಳನ್ನೇ ವಿವಾಹವಾಗಿದ್ದ ರಾಜು ಸಂಸಾರದಲ್ಲಿ ಯಾವುದೇ ಬಿರುಕು ಇರಲಿಲ್ಲ. ಗಾರೆ ಕೆಲಸ ಮಾಡಿಕೊಂಡಿದ್ದ ರಾಜು ಚೆನ್ನಾಗಿಯೇ ಇದ್ದ. ಆದರೆ ಕಳೆದ ಮೂರು ದಿನದ ಹಿಂದೆ ರಾಜುವಿನ ಮನೆ ಮುಂದೆ ಯಾರೋ ಆಗದವರು ಮಾಟ ಮಾಡಿಸಿ ನಿಂಬೆಹಣ್ಣು, ಮಡಿಕೆ-ಕುಡಿಕೆಗಳನ್ನು ಬಿಸಾಡಿ ಹೋಗಿದ್ದರು. ಎಷ್ಟೇ ಹೇಳಿದರು ಕೇಳದ ರಾಜು ಅದನ್ನು ಕೈಯಿಂದ ಬೀಸಾಡಿದ್ದನ್ನು ಇಡೀ ಬೀದಿಯ ಜನ ನೋಡಿದ್ದರು. ಅಂದಿನಿಂದ ಮಂಕಾಗಿದ್ದ ರಾಜು ನಿನ್ನೆ ಅಮಾವ್ಯಾಸೆಯಂದು ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಮಾಟದ ಕಾಟವೇ ಇರಬೇಕೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆಯಿಂದ ಗ್ರಾಮದ ಜನತೆಯೇ ಆತಂಕ ವ್ಯಕ್ತಪಡಿಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮೈಸೂರು ದಕ್ಷಿಣಾ ಠಾಣೆಯ ಪೊಲೀಸರು ಅಗ್ನಿಶಾಮಕ ದಳದ ಸಹಾಯದೊಂದಿಗೆ ದಡದಳ್ಳಿ ಕೆರೆಯಲ್ಲಿ ಮೃತರ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.

See also  ಪ್ರೊ.ವಿರುದ್ದ ವಿದ್ಯಾರ್ಥಿಗಳಿಂದ ದೂರು...ಏಕೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು