ಮೈಸೂರು: ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅನ್ನದಾತ, ಯೋಧರ ಬಗ್ಗೆ ಕಾಳಜಿ ಇಲ್ಲ. ಕನಿಷ್ಠ ದೇಶ ರಕ್ಷಣೆಗೆ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರ ಕುಟುಂಬಗಳಿಗೆ ಸಾಂತ್ವನ ಹೇಳುವಷ್ಟು ಕರುಣೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ವಿರುದ್ಧ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಖಾಸಗಿ ಹೊಟೇಲ್ನಲ್ಲಿ ಜಿಲ್ಲಾ ಪಂಚಾಯತ್-ತಾಲೂಕು ಪಂಚಾಯತಿಯಲ್ಲಿ ಉಂಟಾಗಿರುವ ಪಕ್ಷದಲ್ಲಿನ ಭಿನ್ನಮತ ಶಮನಗೊಳಿಸಲು ಕಾರ್ಯಕರ್ತರ ಸಭೆ ನಡೆಸಿದ ಕುಮಾರಸ್ವಾಮಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸಿಎಂ ಸಿದ್ಧರಾಮಯ್ಯನವರ ವರುಣಾ ಕ್ಷೇತ್ರದಲ್ಲಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಿಎಂ ಕೈಗೊಂಬೆಯಾಗಿದ್ದು, ಇಲ್ಲಿ ಜೆಡಿಎಸ್ ಸ್ಪರ್ದೆಯಿಂದ ಹಿಂದೆ ಸರಿಯಲು ಕಾರಣವೆಂದು ತಿಳಿಸಿದರು.
ಸಿಎಂ ಅವರ ದುಬಾರಿ ವಾಚ್ ವಿಷಯವಾಗಿ ಪ್ರತಿಕ್ರಿಯಿಸಿ ಸೆಕೆಂಡ್ ಹ್ಯಾಂಡ್ ವಾಚ್ ಕೊಳ್ಳಲು ನಾನೇನು ಗುಜರಿ ಅಂಗಡಿ ಇಟ್ಟಿಲ್ಲವೆಂದು ಪುನರ್ ಉಚ್ಚರಿಸಿದ ಅವರು ಜಿಲ್ಲಾ ಪಂಚಾಯಿತಿಯಲ್ಲಿ 14 ಜಿಲ್ಲೆಗಳಲ್ಲಿ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಡಿಸಿದರು.