ಮೈಸೂರು: ಜೀವನಕ್ಕೆ ಸ್ವಂತ ಮನೆಯಿಲ್ಲ, ಊಟಕ್ಕಾಗಿ ದಿನಬೆಳಗಾದರೆ ಕೂಲಿ ಕೆಲಸಕ್ಕೆ ಹೋಗುವ ತಾಯಿ ತಿಂಗಳಿಗೆ ಹಣ ಕಳುಹಿಸಿದರೆ ಬಾಡಿಗೆ ಕೊಡಬಹುದಷ್ಟೇ ಇನ್ನೂ ತಂದೆ ಮಾಡಿದ ಸಾಲ ತೀರಿಸಲಾಗಿಲ್ಲ. ಇದು ದೇಶ ರಕ್ಷಣೆಗಾಗಿ ಪ್ರಾಣತೆತ್ತ ಮೃತ ಮೈಸೂರು ಯೋಧ ಮಹೇಶ್ ರವರ ಕುಟುಂಬದ ಕುರುಣಾಜನಕ ಸ್ಥಿತಿ ಇದು.
ಕಳೆದ ವಾರ ಸಿಯಾಚಿನ್ ಹಿಮಾಪಾತದಲ್ಲಿ ಸಿಲುಕಿ ಧಾರುಣಾವಾಗಿ ಸಾವಿಗೀಡಾದ ಮೈಸೂರು ಜಿಲ್ಲೆಯ ಹೆಚ್.ಡಿ ಕೋಟೆ ಪಟ್ಟಣದ ಜೋಣುಗೆರಿ ಬೀದಿಯ ಯೋಧ ಮಹೇಶ್ ಅವರಿಗೆ ವಾಸ ಮಾಡಲು ಒಂದು ಸ್ವಂತ ಮನೆಯೂ ಇಲ್ಲ. ಸರ್ಕಾರದವತಿಯಿಂದ ಆಶ್ರಯ ಮನೆಗೆ ಅರ್ಜಿ ಹಾಕಿದರೂ ಸರ್ಕಾರ ಒಂದು ಕನಿಷ್ಟ ಆಶ್ರಯ ಮನೆಯನ್ನು ಕೂಡ ನೀಡಿಲ್ಲ. ಇಂತಹ ಸ್ಥಿತಿಯಲ್ಲಿ ಇರುವ ಮೃತ ಯೋಧನ ತಾಯಿ ಸರ್ವಮಂಗಳ 25 ವರ್ಷಗಳ ಹಿಂದೆ ಹೆಚ್.ಡಿ.ಕೋಟೆ ಪಟ್ಟಣಕ್ಕೆ ಬಂದು ನೆಲೆಸಿದ್ದರು.
ಮೃತ ಯೋಧನ ತಂದೆ ಶಾಲಾ ಶಿಕ್ಷಿಕರಾಗಿ ನಿವೃತ್ತಿ ಹೊಂದಿ ಮೃತರಾಗಿದ್ದು, ಇವರು ವಿಪರೀತ ಮಧ್ಯವ್ಯಸನಿಯಾಗಿ ಬಂದ ಸಂಬಳವನ್ನೆಲ್ಲಾ ಮದ್ಯಕ್ಕೆ ಖರ್ಚು ಮಾಡುತ್ತಿದ್ದರು. ನಿವೃತ್ತಿ ನಂತರ ಬಂದ ಹಣವೆಲ್ಲವನ್ನೂ ಮಾಡಿಕೊಂಡಿಕೊಂಡಿದ್ದ ಕೈ ಸಾಲಕ್ಕೆ ಕೊಟ್ಟು ನಂತರ ಮರಣ ಹೊಂದಿದ್ದಾರೆ. ಜೀವನ ನಿರ್ವಹಣೆ ಕಷ್ಟವಾದಾಗ ಮಗ ಓದು ಮುಂದುವರೆಸಲಾಗದೆ 2004 ರಲ್ಲಿ ಸೇನೆಗೆ ಸೇರಿದ ಅಲ್ಲಿ 3 ಬಾರಿ ಚಿನ್ನದ ಪದಕವನ್ನು ಸಹ ಪಡೆದ. ಆದರೆ ವೀರ ಯೋಧ ಸೇನೆ ಸೇರಿದ ಮೇಲೆ ತಂದೆ ಮಾಡಿದ ಸಾಲವನ್ನು ತನ್ನ ಸಂಬಳದ ಹಣದಲ್ಲಿ ಸಾಲ ತೀರಿಸಿದನು. ಆದರೆ ಈಗಲೂ ಸಹ 2500 ರೂ ಬಾಡಿಗೆ ಮನೆಯಲ್ಲೇ ವಾಸವಿರುವ ತಾಯಿ ಮುಂದಿನ ಮೂರು ವರ್ಷದ ನಂತರ ಯೋಧ ನಿವೃತ್ತಿಯಾದ ನಂತರ ಬಂದ ಹಣದಲ್ಲಿ ಮನೆ ಕಟ್ಟಿಸುವ ಆಸೆ ಇಟ್ಟುಕೊಂಡಿದ್ದರು.