News Kannada
Tuesday, July 05 2022

ಮೈಸೂರು

ಸೌರಶಕ್ತಿಯಿಂದ ಮನೆಬೆಳಗಿಸಿದ ಭಕ್ತವತ್ಸಲ - 1 min read

Photo Credit :

ಸೌರಶಕ್ತಿಯಿಂದ ಮನೆಬೆಳಗಿಸಿದ ಭಕ್ತವತ್ಸಲ

ಮೈಸೂರು: ಆ ಮನೆಯಲ್ಲೀಗ ಪವರ್ ಕಟ್ ನ ಸಮಸ್ಯೆಯಿಲ್ಲ.. ವಿದ್ಯುದ್ದೀಪಗಳು ಸದಾ ಉರಿಯುತ್ತಲೇ ಇರುತ್ತವೆ.. ಚೆಸ್ಕಾಂನಿಂದ ವಿದ್ಯುತ್ ಪಡೆಯುವ ಬದಲು ಅಲ್ಲಿಗೆ ವಿದ್ಯುತ್ ಸರಬರಾಜು ಮಾಡುತ್ತಿದ್ದಾರೆ.. ಇದೇನಪ್ಪಾ ಹೀಗೆ ಎಂದು ಅಚ್ಚರಿಯಾಗಿರಬಹುದಲ್ಲವೆ? ಹೌದು ಇದು ಅಚ್ಚರಿಯಾದರೂ ಸತ್ಯ.


ಮೈಸೂರಿನ ಜೆ.ಪಿ.ನಗರ ನಿವಾಸಿ ಭಕ್ತ ವತ್ಸಲ ಅವರ ಸಾಧನೆ ಫಲ ಎಂದರೆ ತಪ್ಪಾಗಲಾರದು. ರಾಜ್ಯ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇತ್ತ ಭಕ್ತವತ್ಸಲರವರು ತಮ್ಮ ಮನೆಯಲ್ಲೇ ಸೌರಶಕ್ತಿಯಿಂದ ತಮ್ಮ ಮನೆಗೆ ವಿದ್ಯುತ್ ಪಡೆಯುವುದಲ್ಲದೆ ಹೆಚ್ಚಾದ ವಿದ್ಯುತ್ನ್ನು ಚೆಸ್ಕಾಂಗೆ ನೀಡಲು ಮುಂದಾಗಿದ್ದಾರೆ.  

ಹಾಗೆ ನೋಡಿದರೆ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ಪ್ರತಿ ಬಾರಿಯೂ ಬೇಸಿಗೆ ಬರುತ್ತಿದ್ದಂತೆಯೇ ಅದರ ತೀವ್ರತೆ ನಮ್ಮ ಅರಿವಿಗೆ ಬರುತ್ತದೆ. ಸದಾ ಪವರ್ ಕಟ್ ನ ಶಿಕ್ಷೆಗೆ ಜನ ಬಲಿಯಾಗಬೇಕಾಗುತ್ತದೆ. ಹೆಚ್ಚಾಗಿ ಜಲ ಮೂಲದ ವಿದ್ಯುತ್ ಗೆ ನಾವು ಮೊರೆ ಹೋಗಿರುವುದರಿಂದಾಗಿ ನಾವು ಬೇಸಿಗೆ ಕಾಲದಲ್ಲಿ ವಿದ್ಯುತ್ ಸಮಸ್ಯೆ ಎದುರಿಸುವುದು ಅನಿವಾರ್ಯವಾಗಿದೆ. ವಿದ್ಯುತ್ ಅನ್ನು ಗಾಳಿ ಮೂಲಕ, ಸೌರಶಕ್ತಿ ಮೂಲಕ ಪಡೆಯಬಹುದಾದರೂ ಅದನ್ನು ಗಂಭೀರವಾಗಿ ಪರಿಗಣಿಸದ ಕಾರಣದಿಂದಾಗಿ ರಾಜ್ಯದಲ್ಲಿ ವಿದ್ಯುತ್ ಕೊರತೆ ಕಂಡುಬರುತ್ತಿದೆ. ಗುಜರಾತ್ ನಲ್ಲಿ ಸೌರಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡು ಕೊಂಡಿದ್ದಾರೆ.

ಇದೆಲ್ಲವನ್ನು ಗಮನಿಸಿದ ಜೆ.ಪಿ.ನಗರದ (ಕೊನೆಯ ಬಸ್ ನಿಲ್ದಾಣದ, ದಕ್ಷಿಣ ರಸ್ತೆಯ ನಂ.47) ನಿವಾಸಿ  ಭಕ್ತವತ್ಸಲ ಅವರು ತಮ್ಮ 30 ಥ 40 ವಾಸದ ಮನೆಯ ತಾರಸಿ ಮೇಲೆ ಸೌರ ವಿದ್ಯುತ್ ಘಟಕವನ್ನು ಸ್ಥಾಪಿಸಿದ್ದಾರೆ. ಈ ಘಟಕ ಸ್ಥಾಪನೆಗೆ ಬ್ಯಾಂಕ್ನಿಂದ ಒಂದಷ್ಟು ಆರ್ಥಿಕ ನೆರವು ಪಡೆದಿರುವ ಅವರು ಇದೀಗ ಸುಮಾರು 5 ಕೆ.ವಿ. ವಿದ್ಯುತ್ ಅನ್ನು ಉತ್ಪಾದಿಸುತ್ತಿದ್ದಾರೆ.

ಇದೀಗ ಸರ್ಕಾರ ರಾಜ್ಯದೊಳಗೆ ಇತರೆ ಮೂಲಗಳಿಂದ ವಿದ್ಯುತ್ ಉತ್ಪಾದಿಸುವವರಿಗೆ ಪ್ರೋತ್ಸಾಹ ನೀಡಲು ಮುಂದಾಗಿದ್ದು, ಸೌರ ವಿದ್ಯುತ್ ಉತ್ಪಾದನೆ ಸಾಧ್ಯವಿರುವೆಡೆ ಬೃಹತ್ ಅಥವಾ ಲಘು ಘಟಕ ಸ್ಥಾಪಿಸಲು ಮುಂದೆ ಬರುವವರನ್ನು ಉತ್ತೇಜಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡ ಭಕ್ತವತ್ಸಲ ಅವರು ತಮ್ಮದೊಂದು ಪ್ರಯತ್ನ ಎಂಬಂತೆ ಸೌರ ಘಟಕ ಸ್ಥಾಪಿಸಲು ಮುಂದಾಗಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ತನ್ನ ಮನೆಯ ಬಳಕೆಗೆ ಈಗಾಗಲೇ ಅಳವಡಿಸಿರುವ ಮಾಪಕದ ಮೂಲಕವೇ ತಾನು ಉತ್ಪಾದಿಸಿದ ವಿದ್ಯುತನ್ನೂ ಇಲಾಖೆಗೆ ಕಳುಹಿಸಿ ಕೊಡುವ ವ್ಯವಸ್ಥೆಯ ಮಾಪಕಗಳನ್ನು ಇಲ್ಲಿ ಅಳವಡಿಸಲಾಗಿದ್ದು,  ಬಳಸಿದ ವಿದ್ಯುತ್ ಕಳೆದು ಹೆಚ್ಚವರಿ ವಿದ್ಯುತ್ ಅನ್ನು ಇಲಾಖೆಗೆ ಒದಗಿಸುತ್ತಿದ್ದಾರೆ. ವಿದ್ಯುತ್ ಇಲಾಖೆ ಯೂನಿಟ್ಗೆ ಇಂತಿಷ್ಟು ಎಂಬಂತೆ ಹಣವನ್ನು ಸಂದಾಯ ಮಾಡುತ್ತಿದೆ. ಭಕ್ತವತ್ಸಲ ಅವರ ಈ ಕಾರ್ಯ ಇತರರಿಗೂ ಮಾದರಿಯಾಗಿದೆ. ಈ ಕಾರ್ಯ ಯೋಜನೆ ಯಶಸ್ವಿಯಾದರೆ ನಿಜಕ್ಕೂ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ತಡೆಗೆ ಸಾಧ್ಯವಾಗಬಹುದೇನೋ?
 

See also  ಸಾಂಸ್ಕೃತಿಕ ನಗರಿಯಲ್ಲಿ ಆಕರ್ಷಣೀಯ ಫುಟ್ ಬಾಲ್ ಮನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು