ಮೈಸೂರು: ತನ್ನ ಹೆಂಡತಿಯ ಕಾಟ ತಾಳಲಾರದೆ ಕುಟುಕ ಗಂಡ ಕುಡಿದ ಅಮಲಿನಲ್ಲಿ 22 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ನಗರದ ವಿದ್ಯಾರಣ್ಯಪುರಂನಲ್ಲಿ ನಡೆದಿದೆ.
ನಗರದ ವಿದ್ಯಾರಣ್ಯಪುರಂ 19 ನೇ ಮುಖ್ಯರಸ್ತೆಯ ನಿವಾಸಿ ದೀಪ(25) ಎಂಬುವವರೇ ಪತಿ ಗೋಪಾಲ್ ಅವರಿಂದ ಬರ್ಬರವಾಗಿ ಕೊಲೆಯಾದ ಮಹಿಳೆಯಾಗಿದ್ದಾರೆ. ಮೇಟಗಳ್ಳಿಯ ನಿವಾಸಿಯಾಗಿದ್ದ ಗೋಪಾಲ್ 8 ವರ್ಷಗಳ ಹಿಂದೆ ವಿದ್ಯಾರಣ್ಯಪುರಂನ ದೀಪಾ ಅವರೊಟ್ಟಿಗೆ ವಿವಾಹವಾಗಿದ್ದರು.
ಕುಡಿತಕ್ಕೆ ದಾಸನಾಗಿದ್ದ ಗೋಪಾಲ್ ನಿತ್ಯ ಕುಡಿದು ಮನೆಯಲ್ಲಿ ರಂಪಾಟ ನಡೆಸುತ್ತಿದ್ದನು. ಇದಕ್ಕಾಗಿ ಹೆಂಡತಿ ದೀಪಾ ಹಾಗೂ ಗೋಪಾಲ್ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು. ಗಂಡನಿಂದ ಬೇಸತ್ತ ದೀಪಾ ವಿದ್ಯಾರಣ್ಯಪುರಂನ ಮನೆ ಸೇರಿದ್ದಳು. ಈ ಹಿನ್ನಲೆಯಲ್ಲಿ ಹೆಂಡತಿಯ ಕಾಟದಿಂದಲೇ ಬಳಲಿದ್ದ ಗಂಡ ಗೋಪಾಲ್ ಅದೇ ಸಿಡಿನಲ್ಲಿ ರಾತ್ರಿ ಕುಡಿದು ಹೆಂಡತಿ ಮನೆಗೆ ಹೋಗಿದ್ದಾನೆ. ಹೆಂಡತಿಯ ತಲೆ ಕಾಲು ಕೈ ಸೇರಿದಂತೆ 22 ಕಡೆಗಳಲ್ಲಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾಗಿರುವ ಪತಿಯ ಹುಡಾಕಾಟ ನಡೆಸಿದ್ದಾರೆ.