ಮೈಸೂರು: ದಿನ ಕಳೆದಂತೆ ಮೈಸೂರು ಜಿಲ್ಲಾ ಪಂಚಾಯಿತಿ ಚುನಾವಣಾ ಕಣ ರಂಗು ಪಡೆದಿದ್ದು ಕಾಂಗ್ರೆಸ್ ಅಭ್ಯರ್ಥಿ ಪರ ಚಾಲೆಜಿಂಗ್ ಸ್ಟಾರ್ ದರ್ಶನ್ ಪ್ರಚಾರದ ರೋಡ್ ಶೋ ನಡೆಸುವ ಮೂಲಕ ರಾಜಕೀಯಕ್ಕೆ ಸಿನಿಮಾ ರಂಗು ಪಡೆದಿದೆ.
ಇಂದು ದಿನದಿಂದ ದಿನಕ್ಕೆ ಮೈಸೂರು ಜಿಲ್ಲಾ ಪಂಚಾಯಿತಿ ಚುನಾವಣಾ ಕಣ ರಂಗು ತುಂಬಿದೆ. ಅದರಲ್ಲೂ ಮೈಸೂರು ಜಿಲ್ಲಾ ಪಂಚಾಯಿತಿ ಚುನವಣಾ ಕಣಕ್ಕೆ ಮುಖ್ಯಮಂತ್ರಿ, ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳು ಸಹ ಬೆಂಬಲಿಗರ ಪರ ಪಕ್ಷದ ಪರ ಭರ್ಜರಿ ಪ್ರಚಾರ ನಡೆಸಿ ಗಮನ ಸೆಳೆದಿದ್ದರು. ಆದರೆ ಇಂದು ಸಂಜೆ ಮೈಸೂರಿನ ಗದ್ದಿಗೆ ಮುಖ್ಯ ರಸ್ತೆಯ ಬೋಗಾದಿಯಲ್ಲಿ ರೋಡ್ ಶೋ ದರ್ಶನ್ ಕಾಣಿಸಿಕೊಳ್ಳುವ ಮೂಲಕ ಸಿನಿಮಾ ರಂಗು ತುಂಬಿದರು. ದರ್ಶನ್ ನೋಡಲು ಮುಗಿಬಿದ್ದ ಜನರು, ನೆಚ್ಚಿನ ನಾಯಕನನ್ನು ಸೆರೆ ಹಿಡಿಯಲು ಅಭಿಮಾನಿಗಳು ಮುಗಿಬಿದ್ದರು.
ರೋಡ್ ಶೋ ಮಧ್ಯದಲ್ಲಿ ಹಿನಕಲ್ ಅಭ್ಯರ್ಥಿ ರಾಕೇಶ್ ಪಾಪಣ್ಣ ಹಾಗೂ ತಾಲೂಕು ಪಂಚಾಯಿತಿ ಅಭ್ಯರ್ಥಿ ಪರ ಮತ ಯಾಚಿಸಿದ ದರ್ಶನ್ ನಾನು ಯಾವುದೇ ಪಕ್ಷದ ಪರ ಇಲ್ಲ. ಇವರಿಬ್ಬರು ನನ್ನ ಆಪ್ತ ಸ್ನೇಹಿತರು ಹಾಗಾಗಿ ಇವರ ಪರ ಮತಯಾಚನೆಗೆ ಬಂದಿದ್ದೇನೆ. ಇನ್ನೂ ರಾಕೇಶ್ ಪಾಪ್ಪಣ್ಣ ಉತ್ತಮ ಸಮಾಜಸೇವಕರಾಗಿದ್ದು ಜನರು ಇವರಿಗೆ ಮತ ಹಾಕುವಂತೆ ಮನವಿ ಮಾಡಿದರು. ನೆಚ್ಚಿನ ನಟನ ಮಾತಿಗೆ ಶಿಳ್ಳೆ ಕೇಕೆ ಹಾಕಿದ ಅಭಿಮಾನಿಗಳು ಬೃಹತ್ ಹಾರಗಳನ್ನು ದರ್ಶನ್ಗೆ ಹಾಕಲು ಮುಗಿಬಿದ್ದರು.
ಸರಿಯಾಗಿ ಸಂಜೆ ವೇಳೆ ಗದ್ದಿಗೆ ಮುಖ್ಯ ರಸ್ತೆಯಲ್ಲೇ ದರ್ಶನ್ ರೋಡ್ ಶೋ ನಡೆಸಿದ್ದರಿಂದ 2 ತಾಸಿಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಕೆಲಸ ಮುಗಿಸಿ ಮನೆಗೆ ಹೋಗುವ ಮಂದಿ ದಾರಿ ಇಲ್ಲದೆ ಪರಿತಪಿಸುವಂತಾಯಿತು. ಈ ವೇಳೆ ಕೆಲ ಸಾರ್ವಜನಿಕರು ರೋಡ್ ಬಂದ್ ಮಾಡಿದವರ ವಿರುದ್ಧವು ಆಕ್ರೋಶ ವ್ಯಕ್ತಪಡಿಸಿದರು.