ಮೈಸೂರು: ಮೈಸೂರು ಮಹಾಸಂಸ್ಥಾನದ ನೂತನ ಮಹಾರಾಜ ಶ್ರೀಯಧುವೀರ ಕೃಷ್ಣ ಚಾಮರಾಜ ಒಡೆಯರ್ ಚುನಾವಣಾ ಕಣಕ್ಕೆ ಸ್ಪರ್ಧೆ ಮಾಡಿದ್ದು, ಮೈಸೂರು ರೇಸ್ ಕ್ಲಬ್ ಹಾಗೂ ಬೆಂಗಳೂರು ಟರ್ಫ್ ಕ್ಲಬ್ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ.
ಮೈಸೂರು ಸಂಸ್ಥಾನದ ನೂತನ ಮಹಾರಾಜ ಶ್ರೀ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರಾದ ಬಳಿಕ ಸಾರ್ವಜನಿಕವಾಗಿ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜ ಪರಂಪರೆಯಲ್ಲಿ ಹಿಂದಿನಿಂದಲೂ ಮೈಸೂರು ರೇಸ್ ಕ್ಲಬ್ ಹಾಗೂ ಮೈಸೂರು ಟರ್ಫ್ ಕ್ಲಬ್ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ದಿವಂಗತ ಶ್ರೀಕಂಠದತ್ತ ನರಸಿಂಹ ದತ್ತ ರಾಜ ಒಡೆಯರು ತಮ್ಮ ಜೀವಿತ ಅವಧಿಯಲ್ಲಿ ಈ ಎರಡು ರೇಸ್ ಕ್ಲಬ್ ಗಳಲ್ಲಿ ನಿರ್ದೇಶಕರಾಗಿದ್ದರು. ಅವರ ನಿಧನದ ನಂತರ ರಾಜಪರಂಪರೆಯ ಸಂಪ್ರದಾಯದಂತೆ ನಿರ್ದೇಶಕ ಸ್ಥಾನಕ್ಕೆ ಯಧುವೀರ್ 2 ಕಡೆಗಳಲ್ಲಿ ಸ್ಪರ್ಧಿಸಿದ್ದಾರೆ.
ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನದ ನಂತರ ನಿರ್ದೇಶಕ ಸ್ಥಾನಕ್ಕೆ ನೂತನ ಮಹಾರಾಜ್ ಯಧುವೀರ್ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡುವಂತೆ ಮೈಸೂರು ರೇಸ್ ಕ್ಲಬ್ ಹಾಗೂ ಬೆಂಗಳೂರು ಟರ್ಪ್ ಕ್ಲಬ್ ಗಳಿಗೆ ರಾಜಾಮಾತೆ ಪ್ರಮೋದದೇವಿ ಒಡೆಯರ್ ಪತ್ರ ಬರೆದಿದ್ದು, ಅದರನ್ವಯ ಮಾಚ್ 28 ರಂದು ಬೆಂಗಳೂರಿನ ಟರ್ಫ್ ಕ್ಲಬ್ ಹಾಗೂ ಏಪ್ರಿಲ್ ತಿಂಗಳಲ್ಲಿ ನಡೆಯುವ ಮೈಸೂರು ರೇಸ್ ಕ್ಲಬ್ ಚುನಾವಣೆಗೆ ಯಧುವೀರ್ ಸ್ಪರ್ಧಿಸುವಂತೆ ಪತ್ರ ಬರೆದ ಹಿನ್ನಲೆಯಲ್ಲಿ ಯಧುವೀರ್ ಅವರು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.